ಸುಂಟಿಕೊಪ್ಪ, ಜ. ೨೧: ಕೇಂದ್ರ ಸರಕಾರವು ರಾಷ್ಟಿçÃಯ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿರುವ ಬಗ್ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಕೇಂದ್ರ ಸರಕಾರದಿಂದ ಬಂದಿರುವ ಸುತ್ತೋಲೆಯ ಕುರಿತು ಪ್ರಸ್ತಾಪಿಸಿದಾಗ ಪಂಚಾಯಿತಿ ಸದಸ್ಯ ಹೆಚ್.ಯು. ರಫೀಕ್‌ಖಾನ್ ಅವರು ಈ ಕುರಿತು ವಿರೋಧ ವ್ಯಕ್ತಪಡಿಸಿದರು. ಸಭಾತ್ಯಾಗ ಮಾಡಿದ ಬಳಿಕ ಹೊರಬಂದು ಕೇಂದ್ರ ಸರಕಾರವು ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿದ ಬಗ್ಗೆ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಅವರೊಂದಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಾದ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎಫ್. ಸಬಾಸ್ಟೀನ್, ಆಲಿಕುಟ್ಟಿ, ಶಬ್ಬೀರ್, ನಾಗರತ್ನ ಸುರೇಶ್ ಹಾಗೂ ರೇಷ್ಮಾ ಅವರುಗಳು ಸಭಾತ್ಯಾಗ ಮಾಡಿದರು.