ಶನಿವಾರಸAತೆ, ಜ. ೨೧: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತೂರು ಗ್ರಾಮದ ೪ ದಿನಗಳ ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.

ಮೊದಲ ದಿನ ರಾತ್ರಿ ಕಳಶ ಹಾಗೂ ವೀರಗಾಸೆ ಕುಣಿತದೊಂದಿಗೆ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಪೂಜಾ ಕೈಂಕರ್ಯ ನಡೆದು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ೨ನೇ ದಿನ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ ಕುಮಾರಸ್ವಾಮಿಯ ಅಡ್ಡಪಲ್ಲಕ್ಕಿಯನ್ನು ಅಡ್ಡೆಕುಣಿ ತದೊಂದಿಗೆ ಹೊತ್ತು ಉತ್ಸವ ನಡೆಯಿತು. ಸ್ವಾಮಿಯ ಅಡ್ಡೆಯನ್ನು ಪಕ್ಕದ ಹುಲುಕೋಡು ಜಾತ್ರೆಗೆ ಮೆರವಣಿಗೆಯಲ್ಲಿ ತೆರಳಿ ಪೂಜೆ ಕೈಗೊಂಡು ಅಲ್ಲಿನ ಕಟ್ಟೆಯಲ್ಲಿ ಉತ್ಸವ ಪೂಜೆ ನಡೆಯಿತು.

೩ನೇ ದಿನ ಬೆಳಿಗ್ಗೆ ಹೂವುಗಳ ಅಲಂಕಾರದೊAದಿಗೆ ಅಡ್ಡೆಯ ಕುಣಿತ ನಡೆದು ನಂತರ ಮರಳಿ ಕಿತ್ತೂರು ಗ್ರಾಮಕ್ಕೆ ಬಂದು ಕಟ್ಟೆ ಜಾತ್ರೆಯಲ್ಲಿ ಉತ್ಸವ ನಡೆಯಿತು. ಕಳಶ ಮೆರವಣಿಗೆ ಹಾಗೂ ವೀರಗಾಸೆ ನೃತ್ಯ ಜನಮನ ರಂಜಿಸಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ನಾಲ್ಕನೇ ದಿನ ಜಾತ್ರೆಯ ಪ್ರಯುಕ್ತ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಅನ್ನ ದಾಸೋಹ ನೆರವೇರಿ ಜಾತ್ರಾ ಮಹೋತ್ಸವ ಸಂಪನ್ನವಾಯಿತು.

ಜಾತ್ರಾ ಮಹೋತ್ಸವದಲ್ಲಿ ಕಿತ್ತೂರು ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಂದಿ ಪಾಲ್ಗೊಂಡಿದ್ದರು.