ಪ್ರಕೃತಿ ವಿಕೋಪವನ್ನು ಮುಂದಾಗಿ ಹೇಳಲು ಯಾರಿಗೂ ಸಾಧ್ಯವಾಗದು. ಇದ್ದಕ್ಕಿದ್ದಂತೆ ಭೂತಳದಲ್ಲಿ ಇರುವ ಪದರಗಳು ಚಲನೆಗೊಳ್ಳುವುದರಿಂದ ಅದರ ಹೊಡೆತವು ಭೂಮಿಯ ಮೇಲ್ಪದರಕ್ಕೆ ಸಂವಹನಗೊAಡು ಭೂಮಿಯು ಕಂಪಿಸತೊಡಗುವುದು. ಈ ಕಂಪನದ ತೀವ್ರತೆಗೆ ಅನುಗುಣವಾಗಿ ವಿವಿಧ ರೀತಿಯ ನಷ್ಟಕಷ್ಟಗಳನ್ನು ಜನರು ಅನುಭವಿಸಬೇಕಾಗಬಹುದು. ಬೇಸಿಗೆಯಲ್ಲಿ ದಟ್ಟಾರಣ್ಯದಲ್ಲಿರುವ ಮರಗಳು ಪರಸ್ಪರ ಘರ್ಷಣೆಗೊಂಡು ಅಲ್ಲಿ ಬೆಂಕಿಯ ಕಿಚ್ಚು ಕಾಣಿಸಿಕೊಂಡು ಆ ಬೆಂಕಿಯು ಅರಣ್ಯದ ಬಹುಭಾಗಕ್ಕೂ ವ್ಯಾಪಿಸಿ ಮರಗಿಡಗಳನ್ನು ಸುಟ್ಟುಹಾಕುವುದರೊಂದಿಗೆ ನಾನಾ ಜೀವಸಂಕುಲಗಳ ನಾಶಕ್ಕೂ ಕಾರಣವಾಗಬಹುದು. ಮಳೆಗಾಲದಲ್ಲಿ ನಿರಂತರವಾಗಿ ಭೀಕರವಾದ ಮಳೆಸುರಿದು ಪ್ರವಾಹಕ್ಕೆ ಕಾರಣವಾಗುವುದಲ್ಲದೆ ನಿರ್ಮಿಸಿದ್ದ ಅಣೆಕಟ್ಟುಗಳು ಬಿರುಕುಬಿಟ್ಟು ಜಲಪ್ರಳಯವೂ ಆಗಬಹುದು. ಕೆಲವೊಮ್ಮೆ ಅನಿರೀಕ್ಷಿತವಾಗಿ ಮೇಘಸ್ಫೋಟಗೊಂಡು ಆಗಲೂ ಪ್ರವಾಹ ಉಂಟಾಗಬಹುದು. ಸೂರ್ಯನ ಕಿರಣವು ಮೂಡಿಸುವ ಉಷ್ಣತೆಯ ಏರುಪೇರುಗಳಿಂದ ಆಕಾಶದಲ್ಲಿ ಗಾಳಿಯ ಗುಳಿಗಳಾಗಿ, ಚಂಡಮಾರುತದ ರೂಪವನ್ನು ತಳೆದು ಅವು ಭೂಪದರದತ್ತ ಧಾವಿಸಿ ವಿನಾಶವನ್ನು ತಂದೊಡ್ಡಬಹುದು. ಬೆಟ್ಟಗಳ ಒಳಗಿರುವ ಲಾವಾರಸಗಳು ಸ್ಫೋಟಗೊಂಡು ಬೆಂಕಿ ಮತ್ತು ಭೀಕರ ಹೊಗೆಯನ್ನು ಉಗುಳಿ ತೊಂದರೆಗೆ ಕಾರಣವಾಗಬಹುದು. ಅನಿರೀಕ್ಷಿತವಾಗಿ ಭೂಕುಸಿತವೂ ಆಗಿ ಅದು ಮಾರಣಾಂತಿಕ ರೂಪವನ್ನು ತಾಳಬಹುದು. ಸಮುದ್ರದ ಅಲೆಗಳು ನೂರಾರು ಅಡಿಗಳಷ್ಟು ಎತ್ತರಕ್ಕೆದ್ದು ಸುನಾಮಿಯನ್ನು ಸೃಷ್ಟಿಸಿ ಜನಮಾನಸದ ಮಾರಣಹೋಮವನ್ನೂ ಮಾಡಬಹುದು. ಹೀಗೆ ಪ್ರಕೃತಿ ಮುನಿಯುವುದನ್ನು ತಡೆಯಲು ಹುಲುಮಾನವರಿಗೆ ಸಾಧ್ಯವಾಗದಿದ್ದರೂ ಸೂಕ್ತಸಮಯದಲ್ಲಿ ಸಹಾಯಹಸ್ತವನ್ನು ಚಾಚಿ ಜನರನ್ನು ರಕ್ಷಿಸಿ ಈ ಅನಿರೀಕ್ಷಿತ ಆತಂಕಗಳು ಆಪೋಶನವನ್ನು ತೆಗೆದುಕೊಳ್ಳುವ ಪ್ರಮಾಣವನ್ನು ತಗ್ಗಿಸಬಹುದು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ರಾಷ್ಟಿçÃಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್ ಡಿ ಎಮ್ ಎ) ಮತ್ತು ರಾಷ್ಟಿçÃಯ ವಿಪತ್ತು ಪ್ರತಿಕ್ರಿಯಾಬಲ ಎಂಬ ಎರಡು ರಕ್ಷಣಾ ಘಟಕಗಳನ್ನು ಸ್ಥಾಪಿಸಿ ವಿಪತ್ತಿನ ಸಂದರ್ಭದಲ್ಲಿ ನಾಗರಿಕರಿಗೆ ನೆರವು ನೀಡಲಾಗುತ್ತದೆ.
೨೦೦೧ರಲ್ಲಿ ಭುಜ್‌ನಲ್ಲಿ ಆದ ಅತಿಭೀಕರ ಭೂಕಂಪನ ಹಾಗೂ ೨೦೦೪ರಲ್ಲಿ ಸಮುದ್ರದ ಅಲೆಗಳೆದ್ದು ಸುನಾಮಿಯನ್ನು ಸೃಷ್ಟಿಸಿದುದನ್ನು ಕಂಡು ಭಾರತ ಸರಕಾರವು ೨೦೦೫ರ ಸೆಕ್ಷನ್೪೪ ಆ್ಯಕ್ಟ್ನ ಅನ್ವಯ ೨೦೦೬ರ ಜನವರಿ ೧೯ ರಂದು ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆಯನ್ನು ಸ್ಥಾಪಿಸಿತು. ಈ ಪಡೆಗೆ ಮುಖ್ಯವಾಗಿ ಗಡಿ ಸಂರಕ್ಷಣಾ ಪಡೆ, ಕೇಂದ್ರ ಕೈಗಾರಿಕೆ ರಕ್ಷಣಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಇಂಡೋ-ಟಿಬೆಟಿಯನ್ ಗಡಿ ಆರಕ್ಷಕ ಪಡೆ ಮತ್ತು ಸಶಸ್ತç ಸೀಮಾಬಲ ಮೊದಲಾದ ದಳಗಳಿಂದ ತಲಾ ೧೧೧೯ ಸದಸ್ಯರನ್ನು ಆಯ್ದುಕೊಂಡು ಒಟ್ಟು ಸುಮಾರು ೧೮,೦೦೦ ಯೋಧರನ್ನು ಆಯೋಜಿಸಲಾಗಿದೆ. ಇವರು ೧೮ ವಿವಿಧ, ವಿಶೇಷ ರೀತಿಯ ಬದುಕನ್ನು ನೀಡುವ ಕಲೆಯಲ್ಲಿ ತರಬೇತಿ ಹೊಂದಿದ್ದು ಇದರಲ್ಲಿ ಅಭಿಯಂತರರು, ವೈದ್ಯರು, ವಿದ್ಯುತ್ ಉಪಕರಣಗಳನ್ನು ನಿರ್ವಹಿಸುವವರು ಮತ್ತು ಶ್ವಾನದಳದÀ ಪರಿಣತರು ಇರುÀವರು. ಇವರ ಮುಖ್ಯ ಸ್ಥಾನವು ನವದೆಹಲಿಯಲ್ಲಿದ್ದು ಗೃಹ ಮಂತ್ರಾಲಯದ ಅಧೀನದಲ್ಲಿ ಕರ್ತವ್ಯ ಮಾಡಬೇಕಾಗುತ್ತದೆ. ಈ ಘಟಕವನ್ನು ಪ್ರಮುಖವಾಗಿ ಬೆಂಗಳೂರು, ಚೆನ್ನೆöÊ, ಪೂನ, ಕೊಲ್ಕತ್ತ, ಗೌಹಾತಿ ಮೊದಲಾದ ಕಡೆಗಳಲ್ಲಿ ಸ್ಥಾಪಿಸಲಾಗಿದೆ,
ಈ ಪಡೆಗೆ ಮೊದಲನೆಯದಾಗಿ, ವಿಪತ್ತು ಸಂಭವಿಸಿದಾಗ ಅದಕ್ಕೆ ಸಿಲುಕಿಕೊಂಡವರನ್ನು ಹುಡುಕುವುದು ಮತ್ತು ರಕ್ಷಿಸುವುದು ಪ್ರಮುಖ ಹೊಣೆಯಾಗಿದೆ. ಅತಿ ಕಡಿಮೆ ಸಮಯದಲ್ಲಿ ಸಂಕಷ್ಟದಲ್ಲಿ ಸಿಲುಕಿದವರನ್ನು ಹುಡುಕಿ ಅವರಿಗೆ ರಕ್ಷಣೆ ಕೊಡುವುದು ಇವರ ಕರ್ತವ್ಯವಾಗಿದೆ. ಅಪಾಯದ ಸ್ಥಳದಿಂದ ಜನರನ್ನು ಹೊರಗೆ ತಂದು ಸುರಕ್ಷಿತ ಸ್ಥಳಗಳಿಗೆ ಅವರನ್ನು ಒಯ್ಯುವುದರ ಜೊತೆಯಲ್ಲಿ ಅವರಿಗೆ ಬೇಕಾದ ಆಹಾರ, ನೀರು, ಔಷಧಿ ಮತ್ತು ಮೂಲಭೂತ ಅಗತ್ಯಗಳ ಸರಬರಾಜು ಮಾಡುವುದು ಈ ಪಡೆಯ ಜವಾಬ್ದಾರಿಯಾಗಿದೆ. ಇದರೊಂದಿಗೆ ವಿಪತ್ತು ಇಲ್ಲದ ಸಮಯದಲ್ಲಿಯೂ ಸಮುದಾಯ ತರಬೇತಿ ನೀಡುವುದು ವಿಪತ್ತು ತಯಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಕೃತಕವಾಗಿ ಆಪತ್ತನ್ನು ಸೃಷ್ಟಿಸಿ ಅದನ್ನು ನಿರ್ವಹಿಸುವುದು, ದೇಶದ ಇತರ ಸೇನೆಗಳೊಂದಿಗೆ ಸಹಕಾರ ಮತ್ತು ಸಮನ್ವಯವನ್ನು ಮಾಡಿಕೊಳ್ಳುವುದು ಇವರ ಹೊಣೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ರಾಸಾಯನಿಕ ಆಕಸ್ಮಿಕಗಳು ಬಂದಾಗ ಆ ಆಪತ್ತನ್ನು ನಿರ್ವಹಿಸುವುದು, ಅಣುವಿಕಿರಣದ ಸಂದರ್ಭದಲ್ಲಿ ಕರ್ತವ್ಯವನ್ನು ಮಾಡುವುದು, ಆಳವಾದ ಬಾವಿಗಳಲ್ಲಿ ಜನರು ಬಿದ್ದಾಗ ಅವರನ್ನು ರಕ್ಷಿಸುವುದು. ಅತಿ ಎತ್ತರದ ಕಟ್ಟಡಗಳು ಧರಾಶಾಹಿಯಾದಾಗ ಅವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಮೊದಲಾದ ಹೊಣೆಗಳನ್ನೂ ನೀಡಲಾಗಿದೆ. ಇದರೊಂದಿಗೆ ಇದಕ್ಕಾಗಿ ಇಸ್ರೆöÊಲ್ ಮತ್ತು ಜಪಾನ್‌ನೊಂದಿಗೆ ಅಂತರರಾಷ್ಟಿçÃಯ ತರಬೇತಿ ಮತ್ತು ಸಹಕಾರವನ್ನೂ ಪಡೆಯಲಾಗುತ್ತಿದೆ.
ಈ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸೂಕ್ತ ತರಬೇತಿ ನೀಡಿ ಅವರ ದೈಹಿಕ ಕ್ಷಮತೆಯನ್ನು ಮೇಲ್ಮಟ್ಟದಲ್ಲಿ ಇರಿಸಲಾಗುತ್ತದೆ. ಇವರು ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನರನ್ನು ರಕ್ಷಿಸಬೇಕಾಗಿರುವುದರಿಂದ ಇಲ್ಲಿ ಕೇವಲ ಅರ್ಹರಿಗೆ ಮಾತ್ರ ಆಯ್ಕೆಯಾಗಲು ಸಾಧ್ಯವಾಗುತ್ತದೆ. ಈ ಪಡೆಗಳಿರುವುದರಿಂದಲೇ ಇವರಿಂದ ವಿಪತ್ತಿನಲ್ಲಿ ಪ್ರಾಣÀವನ್ನು ಉಳಿಸಿಕೊಂಡವರ ಸಂಖ್ಯೆಯು ಹಲವು ಲಕ್ಷಗಳನ್ನು ದಾಟಿದೆ.
ಆದರೆ, ದೋಣಿ ದಾಟಿದ ಮೇಲೆ ಅಂಬಿಗನನ್ನು ಮರೆಯುವವರೇ ಜಾಸ್ತಿ ಎನ್ನುವಂತೆ ಜನರ ರಕ್ಷಣೆಗಾಗಿ ದುಡಿಯುವ ಇವರನ್ನು ಇವರ ವೃದಾಪ್ಯದಲ್ಲಿ ಸಮಾಜ ಮರೆತು ಬಿಡುವುದು ಎಂದಿಗೂ ತರವಲ್ಲ.
ಈ ದಿಕ್ಕಿನಲ್ಲಿ ನವ ಪೀಳಿಗೆಯು ಚಿಂತನೆಯನ್ನು ಹರಿಸಿದರೆ ವಿಪತ್ತು ನಿರ್ವಹಣಾ ಪಡೆಯ ದಿನದ ಆಚರಣೆಗೆÀ ಮಹತ್ವ ಬರಬಹುದು, ನಿರ್ವಾ ಹಕರ ಮನೋಬಲವು ದುಪ್ಪಟ್ಟು ಗೊಳ್ಳಬಹುದು.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು. ಮೊ. ೯೧೪೧೩೯೫೪೨೬.