ಕೂಡಿಗೆ, ಜ. ೧೮: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಮುಖ್ಯ ನಾಲೆಯ ಆಧುನೀಕರಣ ಸೇರಿದಂತೆ ರೂ. ೭೨ ಕೋಟಿ ವೆಚ್ಚದ ೬.೮೫ ರಿಂದ ೧೪. ೭೫. ರ ವರೆಗಿನ ಮುಖ್ಯ ನಾಲೆಯ ಪ್ರಥಮ ಹಂತದ ಕಾಮಗಾರಿಯು ಆರಂಭಗೊAಡಿದೆ.
ಹಾರAಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರ ಬಹುದಿನಗಳ ಬೇಡಿಕೆ, ನಾಲೆಯ ನೀರು ಸರಾಗ ರೈತರ ಜಮೀನಿಗೆ ತಲುಪಲು ಮತ್ತು ಅಣೆಕಟ್ಟೆಯು ಆರಂಭದಿAದಲೂ ಇದುವರೆಗೂ ಮುಖ್ಯ ನಾಲೆಯ ದುರಸ್ತಿ ಕಾರ್ಯ ನಡೆಯದೆ ನಾಲೆಯಲ್ಲಿಯೂ ಸಹ ನೀರಿನ ಸೋರಿಕೆಯಾಗುತ್ತಿತ್ತು. ಹಾರಂಗಿ ನೀರಾವರಿ ಇಲಾಖೆಯ ಮೂಲಕ ಕಾಮಗಾರಿಯ ಕ್ರಿಯಾ ಯೋಜನೆ ಅನುಗುಣವಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದಾಗಿ ೭೨ ಕೋಟಿ ವೆಚ್ಚದ ಕಾಮಗಾರಿಗೆ ನೀರಾವರಿ ಇಲಾಖೆಯ ಹಣ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಕಾಮಗಾರಿಯು ಪ್ರಾರಂಭಗೊAಡಿದೆ.
ರಾಜ್ಯ ಮಟ್ಟದ ನೀರಾವರಿ ಇಲಾಖೆಯ ಕಾರ್ಯಸೂಚಿ ಅನ್ವಯ ಕಾವೇರಿ ನೀರಾವರಿ ನಿಗಮದ ಮೂಲಕ ೭೨ ಕೋಟಿ ವೆಚ್ಚದ ಹಾರಂಗಿ ಮುಖ್ಯ ನಾಲೆಯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯು ಬೆಂಗಳೂರಿನಲ್ಲಿ ನಡೆದು ಬೆಂಗಳೂರಿನ ಸಿ.ಸಿ. ಕೆ. ಕಂಪನಿಯವರು ಟೆಂಡರ್ ಪಡೆದು, ಈಗಾಗಲೇ ಮೊದಲ ಹಂತದಲ್ಲಿ ಕಾಮಗಾರಿಯನ್ನು ಆರಂಭಿಸಿರುತ್ತಾರೆ. ಕಾಮಗಾರಿಯಲ್ಲಿ ಮುಖ್ಯ ನಾಲೆಯಲ್ಲಿ ತಳ ಭಾಗದ ಕಾಂಕ್ರೀಟ್, ನಾಲೆಯ ಲೈನಿಂಗ್, ಕಿರು ಸೇತುವೆ, ಸೇರಿದಂತೆ ಕ್ರಿಯಾ ಯೋಜನೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನದ ನಿಯಮಾನುಸಾರ ಕಾಮಗಾರಿಯು ನಡೆಯುತ್ತವೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.