ಮಡಿಕೇರಿ, ಜ. ೧೪: ವನ್ಯಪ್ರಾಣಿಗಳ ಉಪಟಳ ತಡೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿರುವ ದಕ್ಷಿಣ ಕೊಡಗಿನ ಬೇಗೂರು-ಚೀನಿವಾಡ, ಕೊಂಗಣ, ಬಿ.ಶೆಟ್ಟಿಗೇರಿ, ಕುಟ್ಟಂದಿ, ವಿ. ಬಾಡಗ, ಈಚೂರು ಕುಂದ, ಹಳ್ಳಿಗಟ್ಟು, ಹುದೂರು ಗ್ರಾಮಗಳ ನಿವಾಸಿಗಳು, ೫ ದಿನದೊಳಗೆ ಸೂಕ್ತ ರೀತಿಯ ಪರಿಹಾರ ಕೈಗೊಳ್ಳದಿದ್ದಲ್ಲಿ ತಾ. ೧೯ ರಂದು ವಿವಿಧ ಸಂಘಟನೆಗಳ ನೆರವಿನೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟಿçÃಯ ಕಾಫಿ ಪಾನೀಯ ಆಂದೋಲನ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ, ಕಾಡಾನೆ, ಹುಲಿ ಹಾವಳಿ ಜಿಲ್ಲಾದ್ಯಂತ ಹೆಚ್ಚಾಗಿದೆ. ಆದರೆ, ಇದುವರೆಗೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರಕಾರಗಳು ವಿಫಲವಾಗಿವೆ. ೨೦೨೨ ರಿಂದ ಇದುವರೆಗೆ ಜಿಲ್ಲೆಯಲ್ಲಿ ೩೬ ಮಂದಿ ವನ್ಯಪ್ರಾಣಿ ದಾಳಿಯಿಂದ ಜೀವ ಕಳೆದುಕೊಂಡಿದ್ದಾರೆ. ರೈತರು ಬೆಳೆ ನಾಶದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನರು ಓಡಾಡಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆಯೂ ಪ್ರತಿಭಟನೆ ನಡೆಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.
ಇದುವರೆಗೂ ಯಾವುದೇ ಸ್ಪಂದನ ಅರಣ್ಯ ಇಲಾಖೆಯಿಂದ ದೊರೆತಿಲ್ಲ. ವನ್ಯಜೀವಿ ದಾಳಿಯಿಂದ ಅನಾಹುತ ಸಂಭವಿಸಿದರೆ ಅದಕ್ಕೆ ಅರಣ್ಯ ಇಲಾಖೆ ಅಧಿಕಾರಿ ಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ವನ್ಯಜೀವಿ ದಾಳಿಯಲ್ಲಿ ಕೊಡಗು ರಾಜ್ಯಕ್ಕೆ ೨ನೇ ಸ್ಥಾನದಲ್ಲಿದೆ. ಆದರೂ ಶಾಶ್ವತ ಪರಿಹಾರ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ. ಕೊಡಗಿನ ಅಧಿಕಾರಿಗಳು ವನ್ಯಪ್ರಾಣಿಗಳನ್ನು ದತ್ತು ತೆಗೆದುಕೊಂಡAತೆ ವರ್ತಿಸುತ್ತಿದ್ದಾರೆ. ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಫಲಪ್ರದವಾದರೂ ಅದನ್ನು ಅಳವಡಿಸಲು ಮುಂದಾಗುತ್ತಿಲ್ಲ. ಯಾವುದೇ ಸರಕಾರ ಬಂದರೂ ಈ ಬಗ್ಗೆ ಚಿಂತಿಸುತ್ತಿಲ್ಲ. ಈ ಸಮಸ್ಯೆಯನ್ನು ಹೇಳುವವರು, ಕೇಳುವವರು ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ದೀರ್ಘಾವಧಿ ಚಿಂತನೆಗಳ ಅಗತ್ಯತೆ ಇದೆ ಎಂದ ಅವರು, ೫ ದಿನದೊಳಗೆ ಕಾಡಾನೆ ಓಡಿಸದಿದ್ದಲ್ಲಿ ಪೊನ್ನಂಪೇಟೆ ಅರಣ್ಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬೇಗೂರು ನಿವಾಸಿ ಕೊಟ್ಟಂಗಡ ರಾಜ ಸುಬ್ಬಯ್ಯ ಮಾತನಾಡಿ, ಬೇಗೂರು-ಚೀನಿವಾಡ, ಬಿ. ಶೆಟ್ಟಿಗೇರಿ, ಕುಟ್ಟಂದಿ, ವಿ. ಬಾಡಗ, ಈಚೂರು ಕುಂದ, ಹಳ್ಳಿಗಟ್ಟು, ಹುದೂರು ಗ್ರಾಮಗಳಲ್ಲಿ ಕಾಡಾನೆ ಉಪಟಳ ಎಲ್ಲೆಮೀರಿದೆ. ಕೃಷಿ ಫಸಲು ವನ್ಯಜೀವಿ ದಾಳಿಗೆ ತುತ್ತಾಗುತ್ತಿದೆ. ಆನೆ ಹಾವಳಿಯಿಂದ ಕೃಷಿಯಿಂದ ದೂರ ಸರಿಯುವ ಸನ್ನಿವೇಶ ಉಂಟಾಗಿದೆ. ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತೋಟ, ಗ್ರಾಮಗಳಲ್ಲಿರುವ ಕಾಡಾನೆಯನ್ನು ಓಡಿಸಬೇಕು. ರೇಡಿಯೋ ಕಾಲರ್ ಅಳವಡಿಸಬೇಕೆಂದು ಆಗ್ರಹಿಸಿದರು. ಹುದಿಕೇರಿ ಗ್ರಾ.ಪಂ. ಸದಸ್ಯ ಮಂಡೆಚAಡ ರಾಜಿ ಪೊನ್ನಪ್ಪ ಮಾತನಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಲು ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ)
ಭಯ ಪಡುವ ಸ್ಥಿತಿ ಉಂಟಾಗಿದೆ. ೫ ದಿನದೊಳಗೆ ಸೂಕ್ತ ಕ್ರಮವಹಿಸದಿದ್ದಲ್ಲಿ ಅಹೋರಾತ್ರಿ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈಚೂರು ಗ್ರಾಮದ ಕೃಷಿಕ ಮದ್ರೀರ ರಶ್ಮಿ ಮಾತನಾಡಿ, ಕಾಡು ಪ್ರಾಣಿಗಳಿಗೆ ಆಹಾರ ಪೂರೈಸುವ ಉದ್ದೇಶದಿಂದ ಕೃಷಿ ಮಾಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಭತ್ತದ ಗದ್ದೆಗಳು ಕಾಡಾನೆಗಳ ದಾಳಿಯಿಂದ ನಷ್ಟಕ್ಕೊಳಗಾಗುತ್ತಿದೆ. ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ರೈತರು ತುತ್ತಾಗುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬಿ.ಶೆಟ್ಟಿಗೇರಿ ಗ್ರಾಮಸ್ಥ ನಾಮೇರ ಮೊಣ್ಣಪ್ಪ, ಬಿಜೆಪಿ ಮುಖಂಡ ಮತ್ರಂಡ ಪ್ರವೀಣ್ ಹಾಜರಿದ್ದರು.