ಮಡಿಕೇರಿ, ಜ. ೧೪: ಮಗ ನೋರ್ವ ತನ್ನ ತಂದೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಘಟನೆಗೆ ಸಂಬAಧಿಸಿದAತೆ ಮೂವರನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹೊಸ್ಕೇರಿ ಗ್ರಾಮದ ದೇವಯ್ಯ ಎಂಬವರಿಗೆ ಸೇರಿದ ಲೈನ್‌ಮನೆಯಲ್ಲಿ ತಾ. ೧೧ ರಂದು ರಾತ್ರಿ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಲೈನ್‌ಮನೆಯಲ್ಲಿ ವಾಸವಿದ್ದ ಬಂಗಾಳ ಮೂಲದ ಕಾರ್ಮಿಕ ಬುರೋ ಎಂಬಾತನೊAದಿಗೆ ಆತನ ಪುತ್ರ ಪ್ರಶಾಂತ್ ಎಂಬಾತ ಕುಡಿದ ಮತ್ತಿನಲ್ಲಿ ಜಗಳವಾಡಿ ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದ. ಬಳಿಕ ಈ ವಿಷಯ ತಿಳಿದ ದೇವಯ್ಯ ಹಾಗೂ ಅವರ ಪತ್ನಿ ಭಾರತಿ ಘಟನೆ ನಡೆದ ಮನೆಗೆ ತೆರಳಿ ಕೊಲೆ ವಿಚಾರವನ್ನು ಯಾರಿಗೂ ತಿಳಿಸದೆ ಪ್ರಕರಣವನ್ನು ಮುಚ್ಚಿಹಾಕುವ ಸಲುವಾಗಿ ಮೃತದೇಹವನ್ನು ಮಡಿಕೇರಿಯ ಹಿಂದೂ ರುದ್ರಭೂಮಿಯೊಂದಕ್ಕೆ ಸಾಗಿಸಿ ಸುಟ್ಟು ಹಾಕಿದ್ದರು. ಈ ಬಗ್ಗೆ ದೊರೆತ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡು ಬುರೋನನ್ನು ಹತ್ಯೆಗೈದ ಆತನ ಪುತ್ರ ಪ್ರಶಾಂತ್ ಹಾಗೂ ಕೊಲೆ ವಿಚಾರವನ್ನು ಯಾರಿಗೂ ತಿಳಿಸದೆ ಶವವನ್ನು ಸಾಗಿಸಿ ಸುಟ್ಟುಹಾಕಿದ ದೇವಯ್ಯ ಹಾಗೂ ಭಾರತಿ ಅವರುಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಶವ ಸಾಗಾಟಕ್ಕೆ ಸಹಕರಿಸಿದ ಇತರ ಆರೋಪಿಗಳÀ ಪತ್ತೆಗೆ ಬಲೆ ಬೀಸಿದ್ದಾರೆ. - ಲವಕುಮಾರ್