ಸೋಮವಾರಪೇಟೆ, ಜ. ೯: ಪರ್ವತಾರೋಹಿ ಡಾ. ಬಿ.ಎಂ.ಲತಾ ಅವರನ್ನು ಸೋಮವಾರಪೇಟೆ ಅಕ್ಕನ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕಿನ ಆಲೂರುಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಅಕ್ಕನ ಬಳಗದ ಪದಾಧಿಕಾರಿಗಳು, ಲತಾ ಅವರನ್ನು ಸನ್ಮಾನಿಸಿ ಗೌರವಿಸಿದರು.

ಮೂಲತಃ ಬಡುಬನಹಳ್ಳಿ ಗ್ರಾಮದವರಾದ ೫೭ರ ಪ್ರಾಯದ ಡಾ. ಲತಾ ಅವರು ಬೆಂಗಳೂರಿನಲ್ಲಿ ಸ್ತಿçÃರೋಗ ತಜ್ಞರಾಗಿದ್ದು, ಇತ್ತೀಚೆಗೆ ಎವರೆಸ್ಟ್ ಬೆಸ್ ಕ್ಯಾಂಪ್ ಮೂಲಕ ಪರ್ವತವೇರಿ ೧೮,೫೧೪ಅಡಿ ಎತ್ತರದ ಕಾಲಾಪತ್ತರ್ ಎಂಬ ಸ್ಥಳ ಕ್ರಮಿಸಿ ಸಾಹಸ ಮೆರೆದಿದ್ದರು.

ವೃತ್ತಿಯಲ್ಲಿ ವೈದ್ಯರಾದರೂ ಮ್ಯಾರಥಾನ್ ಹಾಗೂ ಇನ್ನಿತರೆ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಇವರು, ಈಗಾಗಲೇ ೮೬ದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಜನಜೀವನ ಹಾಗೂ ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಮಹೇಶ್, ಅಕ್ಕನ ಬಳಗದ ಅಧ್ಯಕ್ಷೆ ಗೀತಾರಾಜು, ಕಾರ್ಯದರ್ಶಿ ಮಾಯಾಗಿರೀಶ್, ಉಪಾಧ್ಯಕ್ಷೆ ಸರಿತ ಮಲ್ಲಿಕಾರ್ಜುನ, ಸದಸ್ಯರುಗಳಾದ ಅನುಪಮ ಹಾಗೂ ಜಗದಾಂಬ, ತಪೋಕ್ಷೇತ್ರ ಸೇವಾ ಟ್ರಸ್ಟ್ನ ಸದಸ್ಯರುಗಳಾದ ಪ್ರಕಾಶ್, ನಾರಾಯಣ, ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.