ಚಂದದ ರಸ್ತೆಗಳಿಗೆ ಬಳಸುತ್ತಿದ್ದ ಹಿಂದಿನ ಕಾಲದ ಕೂಲ್ ಟಾರ್ ಶಾಶ್ವತವಾಗಿ ರದ್ದಾಗಿದ್ದರಿಂದ ಈಗಿನ ‘ಬಿಟುಮಿನ್’ ಎಂಬ ಹೊಸ ಮಾದರಿಯ ಡಾಂಬರನ್ನು ೧೫೦ ರಿಂದ ೧೮೫ ಡಿಗ್ರಿ ಸೆಲ್‌ಶಿಯಸ್‌ನಷ್ಟು ಶಾಖದÀಲ್ಲಿ ಕಾಯಿಸಿ ಬಳಸುವುದರಿಂದ ರಸ್ತೆಯ ಗುಣಮಟ್ಟವನ್ನು ಕಾಪಾಡುವ ಮೂಲಕ ಬಾಳಿಕೆ ದೀರ್ಘ ಕಾಲದವರೆಗೆ ಬರುವಂತೆ ಮಾಡಬಹುದು ಎಂದು ಹಿರಿಯ ತಜ್ಞ ಹಾಗೂ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಸತ್ಯನಾರಾಯಣ ರಾವ್ ಅವರು ತನ್ನ ಅಭಿಪ್ರಾಯವನ್ನು ದೃಢಪಡಿಸಿದ್ದಾರೆ.

ರಸ್ತೆಗಳ ಗುಣಮಟ್ಟ ಹಾಗೂ ಈಗಿನ ಡಾಂಬರ್‌ನಿAದ ಡಾಮರೀಕರಣ ತಯಾರಿಸುವ ವಿಧಾನದ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಲಭ್ಯವಾಗುತ್ತಿದ್ದ ಕಪ್ಪು ಬಣ್ಣದ ಗಟ್ಟಿಯಾಗಿರುತ್ತಿದ್ದ ‘ಟಾರ್(ಖಿಂಖ)’ನ್ನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದ ಕಾರಣ ಹಾಗೂ ಮನುಷ್ಯರ ಆರೋಗ್ಯದ ದೃಷ್ಟಿಯಿಂದ ಬಹಳ ವರ್ಷಗಳ ಹಿಂದೆಯೇ ವಿಶ್ವಮಟ್ಟದಲ್ಲಿ ಶಾಶ್ವತವಾಗಿ ರದ್ದು ಮಾಡಿದ್ದರಿಂದ ಆಗಿನ ಟಾರ್ ಈಗ ತಯಾರಿಸುತ್ತಿಲ್ಲ ಎಂದು ಹೇಳಿದರು.

ಈಗಾಗಲೇ ಟಾರ್‌ನ್ನು ವಿಶ್ವಮಟ್ಟದಲ್ಲಿ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಕ್ರ‍್ರೂಡ್ ಆಯಿಲ್‌ನ್ನು ಸಂಸ್ಕರಿಸಿದಾಗ ಪೆಟ್ರೋಲ್, ಡಿಸೇಲ್ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳು ಬಳಿಕ ಕೊನೆಗೆ ಸಿಗುವುದೇ ‘ಬಿಟುಮಿನ್’ ಎಂಬ ಡಾಮರ್. ಇದು ಟಾರಿಗೆ ಹೋಲಿಸಿದಾಗ ಬಹಳ ಒಳ್ಳೆಯ ಗುಣ ಹೊಂದಿದ್ದು, ಮಾನವನ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿರುತ್ತದೆ. ಪ್ರಸ್ತುತ ‘ಬಿಟುಮಿನ್ ಡಾಂಬರ್ ಎಲ್ಲಡೆಯಲ್ಲಿ ಚಾಲ್ತಿಯಲ್ಲಿದ್ದು, ಇದನ್ನು ಅತೀ ಮುಖ್ಯವಾಗಿ ನಿಗದಿತ ಶಾಖದಲ್ಲಿ ಕಾಯಿಸಿದರೆ ಅದರ ಗುಣಮಟ್ಟವನ್ನು ಕಾಯ್ದುಕೊಂಡು ಬಳಸಿದರೆ ಮಾತ್ರ ರಸ್ತೆಗಳು ಹೆಚ್ಚಿನ ವರ್ಷಗಳ ಕಾಲ ಬಾಳಿಕೆ ಬರಲು ಸಾಧ್ಯ ಎಂದರು.

ಈ ಬಿಟುಮಿನ್೪೦/೬೦, ೬೦/೮೦ ಹಾಗೂ ೮೦/೧೦೦ ಗ್ರೇಡ್‌ನಲ್ಲಿ ಲಭ್ಯವಿದ್ದು, ಅವಶ್ಯಕತೆಗೆ ತಕ್ಕಂತೆ ಬಳಸಬಹುದಾಗಿರುತ್ತದೆ. ಈ ‘ಬಿಟುಮಿನ್’ನನ್ನು ಪ್ರಯೋಗಾಲಯದಲ್ಲಿ ತಯಾರಿಕೆ ಸಂದರ್ಭದಲ್ಲಿ ಅದರ ಗುಣಮಟ್ಟವನ್ನು ಪರೀಕ್ಷಿಸಿದ ಬಳಿಕವೇ ಮಾರುಕಟ್ಟೆಗೆ ಬಿಡುವುದಾಗಿದೆ. ಆದರೂ ಗುತ್ತಿಗೆದಾರರು ಪೆನಟ್ರೇಷನ್ ಟೆಸ್ಟ್ ಮಾಡಿದಾಗ ಅದು ನಿಗದಿತ ಉತ್ತಮ ಗುಣಮಟ್ಟದಿಂದ ಕೂಡಿದೆಯಾ ಎಂಬುವುದನ್ನು ಖಾತ್ರಿಪಡಿಸಿದ ಬಳಿಕ ‘ಬಿಟುಮಿನ್ ಡಾಂಬರ್‌ಗೆ ಬೇಬಿ ಜಲ್ಲಿ ಕಲ್ಲು, ಗ್ರಾವಲ್‌ಗಳನ್ನು ಮಿಕ್ಸ್ ಮಾಡಿ ಅದನ್ನು ೧೫೦ ರಿಂದ ೧೮೫ ಡಿಗ್ರಿಯಷ್ಟು ತಾಪಮಾನದÀಲ್ಲಿ ಕಾಯಿಸಬೇಕು. ೧೩೫ ರಿಂದ ೧೫೦ ಡಿಗ್ರಿಯಷ್ಟು ಬಿಸಿಯಾಗಿರುವಾಗಲೇ ರಸ್ತೆ ಡಾಮರೀಕರಣಕ್ಕೆ ಬಳಸಿದರೆ ಮಾತ್ರ ಹೆಚ್ಚು ವರ್ಷಗಳ ಕಾಲ ಆ ರಸ್ತೆಗಳು ಬಾಳಿಕೆ ಬರುತ್ತದೆ' ಎಂದು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.

ಉದಾಹರಣೆಗೆ ಮಡಿಕೇರಿ ನಗರದಲ್ಲಿ ಡಾಮರೀಕರಣ ಮಾಡುವಾಗ ಗುತ್ತಿಗೆ ಪಡೆದವರು ಡಾಂಬರ್, ಬೇಬಿ ಜಲ್ಲಿಕಲ್ಲು, ಗ್ರಾವಲ್‌ಗಳನ್ನು ಮಿಕ್ಸ್ ಮಾಡಿ ತಮ್ಮ ಮಿಕ್ಷರ್ ಪ್ಲಾಂಟ್‌ಅನ್ನು ಹಾಸನ, ಬೆಟ್ಟದಪುರ ಅಥವಾ ಮಟನೂರು ಹೀಗೆ ಎಲ್ಲೋ ದೂರದಲ್ಲಿ ಸ್ಥಾಪನೆ ಮಾಡುವುದರಿಂದ ನೈಜವಾಗಿ ಬೇಕಾಗಿದ್ದ ೧೫೦ ರಿಂದ ೧೮೫ ಡಿಗ್ರಿಯಷ್ಟು ತಾಪಮಾನಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ಕಾಯಿಸುವರು. ಕಾರಣ, ಆ ಮಿಕ್ಸರ್ ಪ್ಲಾಂಟ್‌ನಿAದ ಮಡಿಕೇರಿಗೆ ತಲುಪುವಾಗ ೧೫೦ ರಿಂದ ೧೮೫ ಡಿಗ್ರಿಯಷ್ಟು ತಾಪಮಾನ ಇರುತ್ತದೆ ಎಂಬ ಭಾವನೆ ಗುತ್ತಿಗೆದಾರರದ್ದಾಗಿರುತ್ತದೆ. ಈ ರೀತಿಯಾಗಿ ಮಿಕ್ಸ್ರನ್ನು ಬಳಸಬಾರದು ಎಂದು ಹೇಳಿದರು.

ರಸ್ತೆಗಳಿಗೆ ಸಿಂಪಡಿಸುವ ಬಿಟುಮಿನ್ ತನ್ನ ನೈಜ ಗುಣಮಟ್ಟವನ್ನು ಕಳೆದುಕೊಂಡು ಅದು ನೀರಿನಂತೆ ಆಗುತ್ತದೆ. ಇದನ್ನು ರಸ್ತೆ ಡಾಮರೀಕರಣಕ್ಕೆ ಬಳಸಿದರೆ ಬಿಟಮಿನ್ ಮತ್ತು ಜಲ್ಲಿಕಲ್ಲು, ಮರಳು ಒಂದಕ್ಕೊAದು ಪರಸ್ಪರ ಅಂಟಿಕೊಳ್ಳುವುದಿಲ್ಲ. ಹಾಗಾದಾಗ ಸಿದ್ಧಪಡಿಸಿದ ಡಾಮರೀಕರಣ ಕಾಮಗಾರಿ ಹೆಚ್ಚು ಸಮಯ ಬರದೆ ಕೇವಲ ಒಂದೆರಡು ತಿಂಗಳಲ್ಲಿ ಕಿತ್ತು ಹೋಗುವ ಸಾಧ್ಯತೆ ಇರುತ್ತದೆ. ಇಲ್ಲಿ ತಾಪಮಾನ ಅತೀ ಮುಖ್ಯವಾಗಿರುತ್ತದೆ ಎಂದು ಸತ್ಯನಾರಾಯಣ ಎಂದು ಅವರು ಒತ್ತಿ ಹೇಳಿದರು.

ಅಷ್ಟೇ ಮುಖ್ಯವಾದುದೆಂದರೆ ಡಾಮರೀಕರಣ ಮಾಡುವುದಕ್ಕಿಂತ ಮೊದಲು ಆ ರಸ್ತೆಯ ಉಪಯೋಗದ ಬಗ್ಗೆ ಪರೀಕ್ಷೆ ಮಾಡುವ ಮೂಲಕ ದೃಢಪಡಿಸಿಕೊಳ್ಳಬೇಕಾಗುತ್ತದೆ ಮತ್ತು ನಂತರ ಪ್ರಯೋಗಾಲಯದಲ್ಲಿ ಮಣ್ಣಿನ ಗುಣಮಟ್ಟವನ್ನು ಪರೀಕ್ಷೆಗೊಳಪಡಿಸಿ ಡಾಮರೀಕರಣಕ್ಕೆ ಯೋಗ್ಯವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಾಗುತ್ತದೆ. ಅದರಲ್ಲಿ ವ್ಯತ್ಯಾಸ ಗೋಚರಿಸಿದರೆ ಬಳಸಕೂಡದು ಎಂದ ಅವರು, ನಂತರ ರಸ್ತೆಯಲ್ಲಿರುವ ಧೂಳನ್ನು ಸಂಪೂರ್ಣವಾಗಿ ಸ್ಪೆçÃಯರ್ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ. ನೀರಿನ ಒರತೆಯಿರಕೂಡದು. ಆಗಲೂ ಕೂಡ ತಾಪಮಾನವನ್ನು ಕಾಯ್ದುಕೊಂಡು ನಿರ್ವಹಿಸಬೇಕಾಗುತ್ತದೆ. ಮಿಕ್ಸ್ರ್ ರಸ್ತೆಗೆ ಹರಡಿದ ಕೂಡಲೇ ಹೋಗುವ ‘ಶೀಪ್ ಫುಟ್’ ರೋಲರ್‌ನ ಹಿಂದೆಯೇ ವೈಬ್ರೇಟರ್ ರೋಲರನ್ನು ಓಡಿಸಬೇಕು. ಅದರಲ್ಲೂ ರೋಲರ್‌ಗಳು ೮ ರಿಂದ ೧೦ ಟನ್‌ಗಳಷ್ಟು ಭಾರವಿರಬೇಕಾಗುತ್ತದೆ. ಆದರೆ, ಈ ತಾಂತ್ರಿಕತೆ ಯನ್ನು ಗುತ್ತಿಗೆದಾರರು ಮತ್ತು ಸಂಬAಧಪಟ್ಟ ಇಲಾಖೆಯ ಸಿಬ್ಬಂದಿಗಳು ಗಮನಿಸಿದಾಗ ಮಾತ್ರ ಒಳ್ಳೆಯ ಗುಣಮಟ್ಟದ ಡಾಂಬರು ರಸ್ತೆಯನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಇಲಾಖಾ ಸಿಬ್ಬಂದಿ ಹಾಜರಾತಿ ಕಡ್ಡಾಯ

‘ಬಿಟುಮಿನ್ ಡಾಂಬರ್‌ಗೆ ಆಸ್ಪಲ್ಟ್ ತಯಾರು ಮಾಡುವ ಪ್ಲಾಂಟ್‌ನ ಸ್ಥಳದಲ್ಲಿ ಬೇಬಿ ಜಲ್ಲಿ ಕಲ್ಲು, ಗ್ರಾವಲ್‌ಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಕ್ಸ್ ಮಾಡಲಾಗುತ್ತಿದೆಯೋ ಮತ್ತು ತಾಪಮಾನ ಪ್ರಕಾರ ಮಿಶ್ರಣ ಮಾಡಲಾಗುತ್ತದೆಯೋ ಎಂಬುದನ್ನು ನಿರ್ವಹಿಸಲು ಪ್ಲಾಂಟ್‌ನಲ್ಲಿ ಕಡ್ಡಾಯವಾಗಿ ಸಂಬAಧಪಟ್ಟ ಸಂಪೂರ್ಣ ಮಾಹಿತಿಯುಳ್ಳ ಇಲಾಖೆಯ ಓರ್ವ ಅನುಭವಿ ಸಿಬ್ಬಂದಿ ಇದ್ದು ಮಿಶ್ರಣ ಸರಿಯಾಗಿ ಕ್ರಮಬದ್ಧವಾಗಿ ಆಗುತ್ತಿದೆಯೋ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ಇದರೊಂದಿಗೆ ಮಿಶ್ರಣಕ್ಕೆ ಬಳಸುವ ಸಾಮಗ್ರಿಗಳಾದ ಬೇಬಿ ಜಲ್ಲಿ ಕಲ್ಲು, ಗ್ರಾವಲ್‌ಗಳು ಸಮರ್ಪಕವಾಗಿದೆಯೋ ಎಂಬ ಬಗ್ಗೆ ಕೂಡ ಇಲಾಖೆಗೆ ಗುಣ ನಿಯಂತ್ರಣ (ಕ್ವಾಲಿಟಿ ಕಂಟ್ರೋಲ್) ವಿಭಾಗದಿಂದ ವರದಿ ಪಡೆದು ಸಲ್ಲಿಸಬೇಕಾಗುತ್ತದೆ.

ರಸ್ತೆ ನಿರ್ವಹಣೆ ಬಗ್ಗೆ ಸಂವಾದ ನಡೆದಿತ್ತು

ರಸ್ತೆಗಳ ನಿರ್ಮಾಣ, ನಿರ್ವಹಣೆ ಮತ್ತು ಡಾಮರೀಕರಣ ಇತ್ಯಾದಿ ಕುರಿತಾದ ಸಮಗ್ರ ವಿವರಣೆ ನೀಡಿದ ಬಗ್ಗೆ ೨೦೦೫ರಲ್ಲಿ ಪತ್ರಕರ್ತರೊಂದಿಗೆ ಕೊಡಗು ಪತ್ರಿಕಾಭವನದಲ್ಲಿ ಸಂವಾದ ಕಾರ್ಯಕ್ರಮ ನಡೆದುದನ್ನು ಸತ್ಯನಾರಾಯಣ ಅವರು ಸ್ಮರಿಸಿಕೊಂಡರು.

ಮುಂದೆಯೂ ಇಂತಹ ಸಂವಾದ ನಡೆದರೆ ಎಲ್ಲರಿಗೂ ರಸ್ತೆಗಳ ಕುರಿತಾಗಿ ಮಾಹಿತಿಯ ಅರಿವಾಗುತ್ತದೆ. ಅಲ್ಲದೆ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚು ಬಾಳಿಕೆ ಬರುವಂತಹ ರಸ್ತೆಗಳನ್ನು ನಿರ್ಮಿಸಬಹುದಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಂಡ ಗುಂಡಿಗಳ ನಿರ್ವಹಣೆ

ಯಾವುದೇ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಹೊಂಡ ಗುಂಡಿಗಳನ್ನು ಮುಚ್ಚುವ ಮುನ್ನ ಗುತ್ತಿಗೆದಾರರು ಮೊದಲು ಅದರ ಸುತ್ತ ಸುಮಾರು ಅರ್ಧ ಅಡಿಗಳಷ್ಟು ಚೌಕಾಕಾರದಲ್ಲಿ ಮಣ್ಣನ್ನು ಅಗೆದು ತೆಗೆದ ನಂತರ ಆ ಗುಂಡಿಗಳಿಗೆ ದಪ್ಪ ಜಲ್ಲಿಗಳನ್ನು ತುಂಬಿಸಿ ಅದರ ಮೇಲೆ ಸಿದ್ಧಪಡಿಸಿದ ಡಾಮರನ್ನು ಹಾಕಿದಾಗ ಮಾತ್ರ ಆ ಗುಂಡಿಗಳು ಹೆಚ್ಚು ಕಾಲ ಉಳಿಯಲಿದೆ ಎಂದು ಅಭಿಪ್ರಾಯಿಸಿದರು.

ರಸ್ತೆ ನಿರ್ಮಾಣಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ರಸ್ತೆ ನಿರ್ವಹಣೆಗೂ ನೀಡಿದಾಗ ಮಾತ್ರ ನಾವು ಉತ್ತಮ ಗುಣಮಟ್ಟದ ಸಾರ್ವಕಾಲಿಕ ರಸ್ತೆಯನ್ನು ಹೊಂದಬಹುದಾಗಿರುತ್ತದೆ. ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಅತ್ಯವಶ್ಯಕವಾಗಿರುತ್ತದೆ. ರಸ್ತೆಯ ಮೇಲ್ಪದರದ ಮೇಲೆ ನೀರು ನಿಲ್ಲದೆ ಸರಾಗವಾಗಿ ಚರಂಡಿಗೆ ಹರಿದು ಹೋಗಬೇಕಾಗುತ್ತದೆ ಎಂಬ ಸಲಹೆ ನೀಡಿದರು.

ಕಾಮಗಾರಿ ನಿರ್ವಹಿಸುವ ಯಾವುದೇ ಇಲಾಖೆ ಅಂದರೆ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಇತರ ಸಂಸ್ಥೆಗಳು ನಿಯಮಾನುಸಾರ ಇಲಾಖೆಯ ದರಪಟ್ಟಿ ಹಾಗೂ ವಿವರಣೆಗೆ ಅನುಸಾರವಾಗಿ ಕಾಮಗಾರಿ ನಿರ್ವಹಿಸಬೇಕಾಗಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗುತ್ತಿಗೆದಾರರುಗಳೆಲ್ಲರೂ ಇ-ಟೆಂಡರ್‌ನಲ್ಲಿ ಭಾಗವಹಿಸಿ ಕಾಮಗಾರಿ ಪಡೆಯಬೇಕಾಗಿರುವುದರಿಂದ ನಿಗದಿತ ದರಪಟ್ಟಿಯ ದರಕ್ಕಿಂತಲೂ ಶೇ. ೨೫ ರಿಂದ ಶೇ. ೩೦ ಕಡಿಮೆ ದರದಲ್ಲಿ ಕಾಮಗಾರಿ ನಿರ್ವಹಿಸಲು ಮುಂದೆ ಬರುತ್ತಿದ್ದು, ಇದು ಆಘಾತಕಾರಿಯಾಗಿದೆ. ತಾಂತ್ರಿಕ ವಿವರಣೆ ಅನುಸಾರ ಒಳ್ಳೆಯ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಕಷ್ಟಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರಸ್ತೆ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳ ಗುಣಮಟ್ಟ, ಇಲಾಖಾ ಸಿಬ್ಬಂದಿಯ ಕಾರ್ಯತತ್ಪರತೆ, ವಿವರಣೆ ಅನುಸಾರ ತಾಂತ್ರಿಕ ನಿರ್ವಹಣೆ ಅನುಭವಿ ಗುತ್ತಿಗೆದಾರರು ಕಾಮಗಾರಿಯ ಮೇಲೆ ಸಂಬAಧಪಟ್ಟ ಇಂಜಿನಿಯರ್‌ಗಳ ಹಿಡಿತ ಹೊಂದಾಣಿಕೆ, ಒಳ್ಳೆಯ ಗುಣಮಟ್ಟದ ರಸ್ತೆಯನ್ನು ಸಮಾಜಕ್ಕೆ ನೀಡಲು ಸಹಕಾರಿಯಾಗಿರುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಜನರಿಗೂ ಜವಾಬ್ದಾರಿ ಇದೆ

ತಮ್ಮ ತಮ್ಮ ಗ್ರಾಮ ಅಥವಾ ಪಟ್ಟಣಗಳಲ್ಲಿ ರಸ್ತೆಗಳಿಗೆ ಡಾಮರೀಕರಣ ಮಾಡುವ ಸಂದರ್ಭ ಗುತ್ತಿಗೆದಾರರು ಸಮರ್ಪಕವಾಗಿ ಡಾಮರೀಕರಣ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಬೇಕು. ಕಳಪೆಯಾಗಿದ್ದಲ್ಲಿ ಸಂಬAಧಪಟ್ಟವರಿಗೆ ದೂರು ನೀಡುವುದು ಅಥವಾ ಕಳಪೆಯಿಲ್ಲದಂತೆ ಮಾಡಲು ಸಲಹೆ ನೀಡಬೇಕಾಗುತ್ತದೆ.

ಇನ್ನು ಮುಖ್ಯವಾಗಿ ಡಾಮರೀಕರಣ ಮಾಡಿದ ಕೂಡಲೇ ಯಾರೂ ತಮ್ಮ ವಾಹನಗಳನ್ನು ಆ ರಸ್ತೆ ಮೇಲೆ ನಿಗದಿತ ಸಮಯದವರೆಗೆ ಓಡಿಸಬಾರದು. ಹಾಗೆ ಮಾಡದಿದ್ದಲ್ಲಿ ತಮ್ಮದೇ ಊರಿನ ರಸ್ತೆಗಳು ಹೆಚ್ಚಿನ ಕಾಲದವರೆಗೆ ಬಾಳಿಕೆ ಬರಲಾರದು. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

- ಎಂ. ಶ್ರೀಧರ್ ಹೂವಲ್ಲಿ