ಮಡಿಕೇರಿ. ಜ. ೯: ೧೯೮೦ರ ದಶಕದಲ್ಲಿ ಪೊನ್ನಂಪೇಟೆ ಶ್ರೀ ರಾಮ ಕೃಷ್ಣ ಶಾರದಾಶ್ರಮದ ಅಧ್ಯಕ್ಷರಾಗಿ ಸಂಸ್ಥೆಯ ಮುನ್ನಲೆಗೆ ಶ್ರಮಿಸುವುದರೊಂದಿಗೆ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿದ ಸ್ವಾಮಿ ಸುಖಾತ್ಮಾನಂದರ ಸಂಸ್ಮರಣೆ ಕಾರ್ಯಕ್ರಮ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದಲ್ಲಿ ಜರುಗಿತು.
ಈ ವೇಳೆ ಮಠದ ಅಧ್ಯಕ್ಷರಾಗಿರುವ ಸ್ವಾಮಿ ಪರಹಿತಾನಂದ ಮಹಾರಾಜ್ ಅವರ ನೇತೃತ್ವದಲ್ಲಿ ಪೂಜೆ ಹೋಮ ಹವನ ಬಳಿಕ ಸುಖಾತ್ಮಾನಂದರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಈ ಸಂಬAಧ ನುಡಿ ನಮನ ಸಲ್ಲಿಸಲಾಯಿತು. ಆಶ್ರಮದ ಸಂತರಾದ ಭೂದೇಶಾ ನಂದರು ಗೋವಿಂದನಾಥರು, ಬಿ. ಶೆಟ್ಟಿಗೇರಿಯ ಪರಮಾತ್ಮನಂದ, ಹಿರಿಯರಾದ ಸಿ.ಕೆ. ಉತ್ತಪ್ಪ, ಡಾ. ಶಿವಪ್ಪ, ಮೊದಲಾದವರು ಉಪಸ್ಥಿತರಿದ್ದರು.