ಮಡಿಕೇರಿ ಜ. ೯: ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಕೊಡಗು ಜಿಲ್ಲೆಯ ಶನಿವಾರಸಂತೆಯ ಅರುಣ್ ಪ್ರಸಾದ್ ಎಂ.ಎಸ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಪಿಹೆಚ್‌ಡಿ ಪದವಿ ನೀಡಿದೆ.

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ‘ಓoveಟisಣ ಚಿs ಚಿ ಖಿeಚಿಛಿheಡಿ: ಅಚಿಟಿಚಿಜiಚಿಟಿ ಎeತಿish ಈiಛಿಣioಟಿಚಿಟ Woಡಿಟಜ oಜಿ ಒoಡಿಜeಛಿಚಿi ಖiಛಿhಟeಡಿ’ ಎಂಬ ಪ್ರೌಢಪ್ರಬಂಧಕ್ಕೆ ಇಂಗ್ಲೀಷ್ ವಿಷಯದಲ್ಲಿ ಪಿಹೆಚ್‌ಡಿ ಪದವಿಯನ್ನು ನೀಡಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ.ವಿಜಯ್ ಶೇಷಾದ್ರಿ ಅವರ ಮಾರ್ಗದರ್ಶನದಲ್ಲಿ ಅರುಣ್ ಪ್ರಸಾದ್ ಎಂ.ಎಸ್ ಪ್ರೌಢ ಪ್ರಬಂಧವನ್ನು ಮಂಡಿಸಿದ್ದರು.

ಅರುಣ್ ಪ್ರಸಾದ್ ಎಂ.ಎಸ್ ಅವರು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ, ನಿವೃತ್ತ ಮುಖ್ಯ ಶಿಕ್ಷಕ ದಿ.ಶಿವಶಂಕರ್ ಎಂ.ಜಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ನಂಜಮ್ಮ ಕೆ.ಎಂ ದಂಪತಿಯ ಪುತ್ರ.