ಸೋಮವಾರಪೇಟೆ, ಜ. ೧: ಇಲ್ಲಿನ ಆಲೆಕಟ್ಟೆ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆ ಗೋಪೂಜೆಯೊಂದಿಗೆ ಪೂಜಾ ಕೈಂಕರ್ಯಗಳು ಆರಂಭಗೊAಡವು.

ಗಣಪತಿ ಹೋಮವನ್ನು ಜಗದೀಶ್ ಉಡುಪ ನೆರವೇರಿಸಿದರು. ನಂತರ ವೆಂಕಟೇಶ್ವರನ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ನಾಮಾವಳಿ ನಡೆಯಿತು. ಸಂಜೆ ವಿಷ್ಣು ಸಹಸ್ರನಾಮ ನಂತರ ಭಜನಾಮಂಡಳಿಯಿAದ ದೇವರ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರಾತ್ರಿ ಮಹಾಮಂಗಳಾರತಿಯೊAದಿಗೆ ಪೂಜೆ ಸಂಪನ್ನಗೊAಡಿತು. ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದೊಂದಿಗೆ ಫಲಹಾರವನ್ನು ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯದ ಅರ್ಚಕ ಜಯಂತ್ ಭಟ್, ಸುರೇಶ್ ಭಟ್, ಬೆಟ್ಟದಳ್ಳಿಯ ರಾಧಾಕೃಷ್ಣ ಭಟ್, ಶ್ರೀಕಾಂತ್, ಬಜೆಗುಂಡಿ ಮಣಿಸ್ವಾಮಿ ಪೂಜಾ ಕಾರ್ಯದಲ್ಲಿ ಸಹಕರಿಸಿದರು. ದೇವಾಲಯದ ಅಧ್ಯಕ್ಷ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಗೌರವ ಅಧ್ಯಕ್ಷ ಬಿ.ಡಿ.ಗೋವಿಂದ ಮತ್ತಿತರ ಪದಾಧಿಕಾರಿಗಳು ಇದ್ದರು.