ಕುಶಾಲನಗರ, ಜ. ೧: ಇಲ್ಲಿನ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್, ಆರ್ಯ ವೈಶ್ಯ ಮಂಡಳಿ ಆಶ್ರಯದಲ್ಲಿ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ವಾಸವಿ ಸಪ್ತಾಹ -೨೦೨೬ ಉದ್ಘಾಟನೆ ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿ ತಾ. ೨ರಂದು (ಇಂದು) ಬೆಳಗ್ಗೆ ೭ ಗಂಟೆಗೆ ನಡೆಯಲಿದೆ.
ಶ್ರೀ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಡಾ. ಮಂತರ್ ಗೌಡ ಉದ್ಘಾಟನೆ ಮಾಡಲಿದ್ದಾರೆ.
ನಂತರ ವಾಸವಿ ಸಪ್ತಾಹ ಅಂಗವಾಗಿ ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ವಾಕಥಾನ್ ಮತ್ತು ಸೈಕ್ಲೋಥಾನ್ ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್ ಮತ್ತು ಕನ್ನಿಕಾ ವಿಎಸ್ಎಸ್ಎನ್ ಅಧ್ಯಕ್ಷ ಬಿ. ಅಮೃತ ರಾಜ್ ಉದ್ಘಾಟಿಸಲಿದ್ದಾರೆ. ಸರಕಾರಿ ಪಾಲಿಟೆಕ್ನಿಕ್ ಆವರಣದಿಂದ ಬೆಳಗ್ಗೆ ೭.೧೫ ರಿಂದ ಆರಂಭಗೊಳ್ಳುವ ವಾಕಥಾನ್ ಕುಶಾಲನಗರ ಗಣಪತಿ ದೇವಾಲಯ ತನಕ ಸಾಗಲಿದೆ. ಇದೇ ಸಂದರ್ಭ ಕುಶಾಲನಗರ ಕನ್ನಿಕಾ ಇಂಟರ್ ನ್ಯಾಷನಲ್ ಆವರಣದಲ್ಲಿ ಬೆಳಗ್ಗೆ ೯:೩೦ಕ್ಕೆ ಆರಂಭಗೊಳ್ಳಲಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರಕ್ಕೆ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಲಿದ್ದಾರೆ.