ವೀರಾಜಪೇಟೆ, ಡಿ. ೩೧: ಆಂಧ್ರಪ್ರದೇಶದ ಕಡಪದಲ್ಲಿ ನಡೆಯುವ ೩ನೇ ರಾಷ್ಟಿçÃಯ ದಕ್ಷಿಣ ವಲಯ ಸಬ್ ಜೂನಿಯರ್ ಮಹಿಳಾ ಹಾಕಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ತಂಡಕ್ಕೆ ಕೀತಿಯಂಡ ಪೂರ್ವಿ ಪೂವಮ್ಮ ಆಯ್ಕೆಯಾಗಿದ್ದಾಳೆ. ಈಕೆಗೆ ಮಡಿಕೇರಿಯ ಸಾಯಿ ಕ್ರೀಡಾ ಸಂಸ್ಥೆಯಲ್ಲಿ ಮಿನಿ ಉಣ್ಣಿರಾಜನ್ ತರಬೇತಿ ನೀಡುತ್ತಿದ್ದಾರೆ. ಪೂರ್ವಿ ಪೂವಮ್ಮ ಮೂಲತಃ ವೀರಾಜಪೇಟೆಯ ಆರ್ಜಿ ಗ್ರಾಮದ ಕೀತಿಯಂಡ ಮಂಜು ಹಾಗೂ ಕವಿತ ದಂಪತಿಯ ಪುತ್ರಿ.