ಮಡಿಕೇರಿ, ಡಿ. ೩೧: ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಒಂದೇ ದಿನ ವಿವಿಧೆಡೆಗೆ ವರ್ಗಾವಣೆಗೊಂಡಿದ್ದು, ಇವರ ಸ್ಥಾನಕ್ಕೆ ನೂತನ ಅಧಿಕಾರಿಗಳು ನಿಯುಕ್ತಿಗೊಂಡಿದ್ದಾರೆ.
ಜಿಲ್ಲಾಧಿಕಾರಿ ಕೆ. ವೆಂಕಟ್ ರಾಜಾ ಅವರ ಸ್ಥಾನಕ್ಕೆ ಬೆಂಗಳೂ ರಿನಲ್ಲಿ ಗ್ರಾಮೀಣಾಭಿವೃದ್ಧಿ ವಿಭಾಗದ ಆಯುಕ್ತರಾಗಿದ್ದ ಎಸ್.ಜೆ. ಸೋಮಶೇಖರ್ ನಿಯೋಜನೆಗೊಂಡಿದ್ದಾರೆ. ೨೦೨೩ರಲ್ಲಿ ಕೊಡಗು ಜಿಲ್ಲಾಧಿಕಾರಿಯಾಗಿ ನಿಯುಕ್ತಿ ಗೊಂಡಿದ್ದ ವೆಂಕಟ್ ರಾಜಾ ಅವರು ಕಳೆದ ಎರಡೂವರೆ ವರ್ಷಗಳಿಂದ ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಬೆಂಗಳೂರಿನ ಸರ್ವೆ ಹಾಗೂ ಭೂ ದಾಖಲೆಗಳ ವಿಭಾಗದ ಆಯುಕ್ತರಾಗಿ ವರ್ಗಾವಣೆಯಾಗಿದ್ದಾರೆ. ಕೊಡಗಿನ ಆಚಾರ-ವಿಚಾರ, ಪದ್ಧತಿ, ಪರಂಪರೆ ಉಳಿಸ ಬೇಕೆಂಬ ಪ್ರಬಲ ಪ್ರತಿಪಾದನೆ ಮಾಡುತ್ತಿದ್ದ ವೆಂಕಟ್ ರಾಜಾ ಅವರು, ಸುಸ್ಥಿರ ಪ್ರವಾಸೋದ್ಯ ಮವನ್ನು ಜಿಲ್ಲೆಯಲ್ಲಿ ಸೃಷ್ಟಿಸಬೇ ಕೆಂಬ ಹಂಬಲದೊAದಿಗೆ ಕಾರ್ಯ ನಿರ್ವಹಿಸುತ್ತಿದ್ದರು. ಇಲ್ಲಿನ ಪ್ರಕೃತಿ, ಸಂಸ್ಕೃತಿ ಹಿನ್ನೆಲೆ ಯಲ್ಲಿ ಪ್ರವಾಸೋದ್ಯಮ ಮುನ್ನಡೆ ಯಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿ ಸುತ್ತಿದ್ದರು. ೨೦೨೪ರಲ್ಲಿ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೆ ಸುಲಭವಾಗಿ ಸಂಪರ್ಕಕ್ಕೆ ಸಿಗುತ್ತಿದ್ದ ವೆಂಕಟ್ ರಾಜಾ ಅವರ ನಡೆ, ನುಡಿ ಮೆಚ್ಚುಗೆಗೆ ಪಾತ್ರವಾಗಿತ್ತು. ಹೋಂಸ್ಟೇ ನೋಂದಣಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡು ಅನಧಿಕೃತ ಹೋಂಸ್ಟೇಗಳನ್ನು ನಿಯಂತ್ರಣಕ್ಕೆ ತರುವ ಕೆಲಸಕ್ಕೂ ಕೈ ಹಾಕಿದ್ದರು. ೪ಆರನೇ ಪುಟಕ್ಕೆ
ಬೆಳಗಾವಿಗೆ ರಾಮರಾಜನ್
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ ಮೈಸೂರು ನಗರ ಉಪ ಆಯುಕ್ತೆ ಆಗಿದ್ದ ಬಿಂದು ಮಣಿ ನೇಮಕಗೊಂಡಿದ್ದಾರೆ.
೨೦೨೩ರ ಜನವರಿಯಲ್ಲಿ ಎಸ್‌ಪಿಯಾಗಿ ನಿಯುಕ್ತಿ ಗೊಂಡ ಕೆ. ರಾಮರಾಜನ್ ಅವರು ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ರಾಮರಾಜನ್ ತಮ್ಮ ಕಾರ್ಯಾ ವಧಿಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರು. ಒಂದು ರೀತಿಯಲ್ಲಿ ಡ್ರಗ್ಸ್ ಮುಕ್ತ ಕೊಡಗು ನಿರ್ಮಾಣದ ಸಂಕಲ್ಪ ಮಾಡಿದ್ದರು. ನೂರಾರು ಮಾದಕವಸ್ತು ಸಂಬAಧಿತ ಪ್ರಕರಣಗಳನ್ನು ಭೇದಿಸಿ ಹಲವಾರು ಆರೋಪಿಗಳ ವಿರುದ್ಧ ಕಾನೂನಾತ್ಮಕ ಶಿಕ್ಷೆ ನೀಡಿದ್ದರು. ಇದರೊಂದಿಗೆ ಕಷ್ಟಕರವಾದ ಹಲವು ಅಪರಾಧ ಪ್ರಕರಣಗಳ ತನಿಖೆ ನಡೆಸಿ ನೈಜಾಂಶ ಬಯಲಿಗೆ ತರುವಲ್ಲಿಯೂ ಪ್ರಮುಖಪಾತ್ರ ವಹಿಸಿದ್ದರು. ಜೊತೆಗೆ ಪೊಲೀಸ್ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗಾಗಿ ಹತ್ತುಹಲವು ಕಾರ್ಯಕ್ರಮ ನಡೆಸುತ್ತಿದ್ದರು. ವಿಮೆ ಸೌಲಭ್ಯಕ್ಕೆ ಮರುಜೀವ ನೀಡಿ ಪೊಲೀಸ್ ಕುಟುಂಬಕ್ಕೆ ನೆರವಾಗುವಂತೆ ಕೆಲಸ ಮಾಡಿ ಶ್ಲಾಘನೆಗೂ ಪಾತ್ರರಾಗಿದ್ದರು. ಪೊಲೀಸರ ಪ್ರತಿಭೆ ಅನಾವರಣಕ್ಕೆ ಸಾಂಸ್ಕೃತಿಕ ವೇದಿಕೆಯನ್ನು ಸ್ಥಾಪಿಸಿ ರಾಜ್ಯಕ್ಕೆ ವಿನೂತನ ಕಾರ್ಯಕ್ರಮ ನಡೆಸಿ ಮಾದರಿಯಾಗಿದ್ದರು.
ಯುವ ಅಧಿಕಾರಿ ಬಿಂದುಮಣಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜನೆಗೊಂಡಿರುವ ಯುವ ಐಪಿಎಸ್ ಅಧಿಕಾರಿ ಬಿಂದುಮಣಿ ಮೂಲತಃ ಬೆಂಗಳೂರಿನವರಾಗಿದ್ದು, ೨೦೨೦ರಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೪೬೮ನೇ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿ ಐಪಿಎಸ್ ಹುದ್ದೆ ಆಯ್ಕೆ ಮಾಡಿಕೊಂಡಿದ್ದರು. ಇವರ ತಂದೆ ನಾಗರಾಜ್ ಕೂಡ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿದ್ದಾರೆ