ಪೊನ್ನAಪೇಟೆ, ಡಿ. ೩೧: ಅಂಬಟ್ಟಿಯ ಪಿಎಸ್‌ಎ ಬಾಯ್ಸ್ ತಂಡದ ವತಿಯಿಂದ ಜನವರಿ ೪ ರಂದು ಪ್ರಥಮ ವರ್ಷದ ನ್ಯಾನೋ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಅಂಬಟ್ಟಿ ಗ್ರಾಮದ ಆಟಗಾರರಿಗೆ ಮಾತ್ರ ಸೀಮಿತವಾಗಿದ್ದು, ಗ್ರಾಮದ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ, ಯುವಕರನ್ನು ಕ್ರೀಡೆಯತ್ತ ಸೆಳೆಯುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಆಯೋಜಕರಾದ ಪ್ರಮೋದ್, ಆಶಿಕ್ ಮತ್ತು ಸುಮಂತ್ ತಿಳಿಸಿದ್ದಾರೆ. ಪಂದ್ಯಾವಳಿ ಆರ್ಜಿಯಲ್ಲಿರುವ ಆಶೀರ್ವಾದ್ ಟರ್ಫ್ ಮೈದಾನದಲ್ಲಿ ನಡೆಯಲಿದೆ. ನಜೀರ್ ಮಾಲೀಕತ್ವದ ಸ್ಟಾರ್ ಬಾಯ್ಸ್ ಅಂಬಟ್ಟಿ, ಶಿಜೇಶ್ ಮಾಲೀಕತ್ವದ ಮ್ಯಾಕ್ಸಿ ಫ್ರೆಂಡ್ಸ್, ಸಿಯಾಬ್ ಮಾಲೀಕತ್ವದ ಸ್ಟೆçöÊಕರ್ಸ್ ಅಂಬಟ್ಟಿ, ಮೊಹಮ್ಮದ್ ಮುಸ್ತಫಾ ಮಾಲೀಕತ್ವದ ಬ್ರದರ್ಸ್ ಕ್ರಿಕೆಟರ್ಸ್ ತಂಡಗಳು ಪಾಲ್ಗೊಳ್ಳಲಿವೆ.