ಶನಿವಾರಸಂತೆ, ಡಿ. ೨೮: ಪಟ್ಟಣದ ಪೊಲೀಸ್ ಠಾಣಾ ಸರಹದ್ದಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಟೋ ಚಾಲಕರಿಗೆ ಹಾಗೂ ಗೂಡ್ಸ್ ವಾಹನ ಚಾಲಕರಿಗೆ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು.
ಪಿಎಸ್‌ಐ ಹೆಚ್.ವೈ. ಚಂದ್ರ ಮಾತನಾಡಿ, ಚಾಲಕರು ಸಂಚಾರಿ ನಿಯಮ ಪಾಲನೆ ಮಾಡಬೇಕು. ಕಾನೂನಿನ ಬಗ್ಗೆ ಅರಿವನ್ನು ಮೂಡಿಸಿಕೊಳ್ಳಬೇಕು ಎಂದರು. ನಂತರ ಸಮೀಪದ ನಿಡ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಸಂಬAಧ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ, ರಸ್ತೆ ನಿಯಮ ಹಾಗೂ ಮಾದಕ ದ್ರವ್ಯಗಳ ದುಷ್ಪರಿಣಾಮದ ಕುರಿತು ಅರಿವು ಮೂಡಿಸಲಾಯಿತು.
ಮುಖ್ಯ ಶಿಕ್ಷಕಿ ನಳಿನಿ ಹಾಗೂ ಶಿಕ್ಷಕರು ಹಾಜರಿದ್ದರು. ವಿವಿಧೆಡೆ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಿಎಸ್‌ಐ ಗೋವಿಂದ್ ರಾಜ್, ಹೆಡ್‌ಕಾನ್ಸಟೇಬಲ್ ಪ್ರದೀಪ್ ಕುಮಾರ್, ಮಹೇಶ್, ಹನೀಫ್, ಪೊಲೀಸ್ ಕಾನ್ಸ್ಟೇಬಲ್ ಅಬ್ದುಲ್ ರೆಹಮಾನ್, ಕೀರ್ತಿ ಪಾಲ್ಗೊಂಡಿದ್ದರು.