ಕೂಡಿಗೆ, ಡಿ. ೨೮: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಸತ್ಯನಾರಾಯಣ ವ್ರತಾಚರಣಾ ಸಮಿತಿಯ ವತಿಯಿಂದ ಸತ್ಯನಾರಾಯಣ ಪೂಜೆ, ಕಿರು ಷಷ್ಠಿ ಪೂಜೆ ನಡೆಯಿತು.
ಬೆಳಿಗ್ಗೆ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಹೋಮ ಹವನ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದು, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನೆರವೇರಿತು.
ಪೂಜಾ ಕೈಂಕರ್ಯಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಭಟ್ ನೇತೃತ್ವದ ತಂಡ ನೆರವೇರಿಸಿತು. ಕಿರು ಷಷ್ಠಿ ಅಂಗವಾಗಿ ಸಂಜೆ ದೇವಾಲಯ ಆವರಣದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಸೇರಿದಂತೆ ಪೂಜೆ ಕಾರ್ಯಗಳು ನಡೆದವು.
ಈ ಸಂದರ್ಭ ಟಾಟಾ ಕಾಫಿ ಸಂಸ್ಕರಣಾ ಕೇಂದ್ರದ ಜನರಲ್ ಮ್ಯಾನೇಜರ್, ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಯು. ರೋಷನ್ ಸೋಮಯ್ಯ, ಸೀನಿಯರ್ ಮ್ಯಾನೇಜರ್ ನವೀನ್, ಸತ್ಯನಾರಾಯಣ ವ್ರತಾಚರಣಾ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಕಾರ್ಯದರ್ಶಿ ನವೀನ್, ಖಜಾಂಚಿ ಕೆ.ವಿ. ಅರುಣ್ ಕುಮಾರ್, ಗೌರವಾಧ್ಯಕ್ಷ ಪೊನ್ನಪ್ಪ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಮೂಡ್ಲಿಗೌಡ, ಹನುಮ ಸೇನಾ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್. ಶಿವಕುಮಾರ್, ಉಪಾಧ್ಯಕ್ಷ ರಿಜು, ಖಜಾಂಚಿ ಧರ್ಮ, ಕಾರ್ಯದರ್ಶಿ ರವಿ, ಸಮಿತಿಯ ಸದಸ್ಯರು ಹಾಜರಿದ್ದರು.