ಮಡಿಕೇರಿ, ಡಿ. ೨೮: ಮಾನವ - ವನ್ಯ ಪ್ರಾಣಿ ಸಂಘÀರ್ಷದಿAದಾಗಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬರುತ್ತಿದ್ದು, ಇದು ಮುಂದುವರಿಯುತ್ತಲೇ ಬರುತ್ತಿದೆ. ಕಳೆದ ೨೦೨೨-೨೩ನೇ ಸಾಲಿನಿಂದ ಈ ತನಕ ಕೊಡಗು ಜಿಲ್ಲೆಯಲ್ಲಿ ಒಟ್ಟು ೩೨ ಮಂದಿ ವನ್ಯಜೀವಿಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಈ ಪ್ರಕರಣಗಳಿಗೆ ಅರಣ್ಯ ಇಲಾಖೆಯ ಮೂಲಕ ಪರಿಹಾರ ಒದಗಿಸಲಾಗಿದೆಯಾದರೂ ಇಷ್ಟು ಮಂದಿ ಜೀವ ಕಳೆದುಕೊಂಡಿರುವುದು ವಿಪರ್ಯಾಸವೆನಿಸಿದೆ. ೨೦೨೨-೨೩ನೇ ಸಾಲಿನಿಂದ ೨೦೨೫-೨೬ನೇ ಸಾಲಿನ ನÀವೆಂಬರ್ ಅಂತ್ಯದ ತನಕ ರಾಜ್ಯದಲ್ಲಿ ಒಟು ೨೦೩ ಮಂದಿ ಬಲಿಯಾಗಿದ್ದಾರೆ. ಚಾಮರಾಜನಗರದಲ್ಲಿ ಅತಿಹೆಚ್ಚು ಪ್ರಕರಣ ವರದಿಯಾಗಿದೆ. ಇಲ್ಲಿ ಒಟ್ಟು ೪೦ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕೊಡಗು ಜಿಲ್ಲೆ ನಂತರದ ಸ್ಥಾನದಲ್ಲಿದ್ದು ಇಲ್ಲಿ ೩೨ ಮಂದಿ ವನ್ಯಜೀವಿಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ೨೦೨೨-೨೩ ರಲ್ಲಿ ೭ ಮಂದಿ ೨೦೨೩-೨೪ ರಲ್ಲಿ ೧೨ ಮಂದಿ, ೨೦೨೪ - ೨೫ ರಲ್ಲಿ ೭ ಹಾಗೂ ೨೦೨೫-೨೬ರ ಸಾಲಿನ ನವೆಂಬರ್ ಅಂತ್ಯದ ತನಕ ೬ ಮಂದಿ ಸೇರಿ ಒಟ್ಟು ೩೨ ಮಂದಿ ಸಾವಿಗೀಡಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ ೧೯, ಮೈಸೂರಿನಲ್ಲಿ ೨೫, ರಾಮನಗರ/ ಬೆಂಗಳೂರು ದಕ್ಷಿಣದಲ್ಲಿ ೧೫ ಹಾಗೂ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ೧೮ ಪ್ರಕರಣಗಳು ನಡೆದಿವೆ.

ಉತ್ತರ ಕನ್ನಡ, ಕೋಲಾರ, ಬೆಂಗಳೂರು ನಗರ, ಶಿವಮೊಗ್ಗದಲ್ಲಿ ತಲಾ ೬ ಮಂದಿ, ದಕ್ಷಿಣ ಕನ್ನಡದಲ್ಲಿ ೮ ಮಂದಿ, ಉಡುಪಿ ೨, ಕಲಬುರ್ಗಿ, ದಾವಣಗೆರೆಯಲ್ಲಿ ತಲಾ ೩ ಮಂದಿ, ಮಂಡ್ಯ ೨, ವಿಜಯಪುರ ಜಿಲ್ಲೆಯಲ್ಲಿ ೩ ಮಂದಿ ಬಲಿಯಾಗಿದ್ದಾರೆ.

ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು, ಯಾದಗಿರಿ, ಚಿತ್ರದುರ್ಗ, ಬೆಳಗಾವಿ , ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಸಾವಿಗೀಡಾಗಿದ್ದಾರೆ. ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರ ಕಚೇರಿ ಮೂಲಕ ನೀಡಲಾಗಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.