ವಿಶಾಖಪಟ್ಟಣ, ಡಿ. ೨೮: ಕಾಫಿ ಪುಡಿ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಏರುಮುಖವಾಗಿರುವ ಬೆನ್ನಲ್ಲೇ ಆಂಧ್ರ ಪ್ರದೇಶ ಮೂಲದ ನಾಂದಿ ಫೌಂಡೇಶನ್‌ನಿAದ ಪ್ರಚಾರ ಮಾಡಲ್ಪಟ್ಟ ಅರಕು ಕಾಫಿ ಬ್ರ‍್ಯಾಂಡ್, ತನ್ನ ನ್ಯಾನೊ ಲಾಟ್ ಸರಣಿಯನ್ನು ಪ್ರಾರಂಭಿಸುವುದರೊAದಿಗೆ ಜಾಗತಿಕ ಮನ್ನಣೆಯ ಹೊಸ ಹಂತವನ್ನು ಪ್ರವೇಶಿಸಿದೆ, ಇದರ ಬೆಲೆ ಪ್ರತಿ ಕೆಜಿಗೆ ರೂ. ೧೦,೦೦೦ ರೂಪಾಯಿ ಆಗಿದ್ದು ಇದು ಭಾರತೀಯ ಅರೇಬಿಕಾ ಕಾಫಿ ಸಾಧಿಸಿದ ಅತ್ಯಧಿಕ ಬೆಲೆಗಳಲ್ಲಿ ಒಂದಾಗಿದೆ.
ಈ ಕುರಿತು “ಎಕ್ಸ್''ನಲ್ಲಿ ಮಾಹಿತಿ ನೀಡಿರುವ ನಾಂದಿ ಫೌಂಡೇಶನ್‌ನ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೊಸ ಕೊಡುಗೆಯು ಅರಕು ಕಾಫಿಯ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸಿದೆ, ಇದನ್ನು ಎರಡು ದಶಕಗಳಿಗೂ ಹೆಚ್ಚು ಕಾಲ ಸಣ್ಣ ಮತ್ತು ಅತಿ ಸಣ್ಣ ರೈತರೊಂದಿಗೆ ನಿರಂತರ ಶ್ರಮದ ಮೂಲಕ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಂದಿ ಫೌಂಡೇಶನ್ ೨೫ ವರ್ಷಗಳಿಗೂ ಹೆಚ್ಚು ಕಾಲ ಅರಕು ಕಣಿವೆಯಲ್ಲಿನ ಕಾಫಿ ಬೆಳೆಗಾರರ ಜೀವನೋಪಾಯವನ್ನು ಸುಧಾರಿಸಲು ಪುನರುತ್ಪಾದಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಮತ್ತು ಉತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಯಲು ತಂತ್ರಗಳನ್ನು ಹಂಚಿಕೊಳ್ಳುವ ಮೂಲಕ ಕೆಲಸ ಮಾಡುತ್ತಿದೆ.
ಈ ಪ್ರಯತ್ನಗಳು, ಈ ಪ್ರದೇಶದಲ್ಲಿ ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಕೃಷಿ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡಿವೆ ಎಂದು ಅವರು ಹೇಳಿದ್ದಾರೆ. ದ್ರಾಕ್ಷಿ ಕೃಷಿ ಮತ್ತು ವೈನ್ ತಯಾರಿಕೆಯಲ್ಲಿ ಸಾಮಾನ್ಯವಾಗಿ ಬಳಸುವ ಟೆರೊಯಿರ್ ವಿಧಾನವನ್ನು (ಣeಡಿಡಿoiಡಿ ಚಿಠಿಠಿಡಿoಚಿಛಿh) ಅರಕುವಿನಲ್ಲಿ ಕಾಫಿ ಕೃಷಿಗೆ ಅನ್ವಯಿಸಿದ ಜಾಗತಿಕವಾಗಿ ಮೊದಲ ಸಂಸ್ಥೆಗಳಲ್ಲಿ ನಾಂದಿ ಕೂಡ ಒಂದು ಎಂದು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಹೀಂದ್ರಾ ಹೈಲೈಟ್ ಮಾಡಿದ್ದಾರೆ. ನ್ಯಾನೊಲಾಟ್ ಸರಣಿಯ ಮೊದಲ ಬಿಡುಗಡೆಯು ೨೪ ಗಂಟೆಗಳಲ್ಲಿಯೇ ಆನ್‌ಲೈನ್‌ನಲ್ಲಿ ಮಾರಾಟವಾಯಿತು, ಆದರೆ ಎರಡನೇ ಬ್ಯಾಚ್ ಎರಡು ಗಂಟೆಗಳಲ್ಲಿ ಮಾರಾಟವಾಗಿದೆ. ಈ ದುಬಾರಿ ದರದ ಕಾಫಿಯು ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಾಫಿ ಪ್ರಿಯರ ಗಮನ ಸೆಳೆದರೆ ಭಾರತದ ಕಾಫಿ ಗೆ ಮತ್ತಷ್ಟು ಬೇಡಿಕೆ ಹಾಗೂ ದರವೂ ಹೆಚ್ಚಳಗೊಳ್ಳಲಿದೆ. ಅರಕು ವ್ಯಾಲಿ ಕಾಫಿ ಪ್ಯಾರಿಸ್ ಸೇರಿದಂತೆ ಅನೇಕ ನಗರಗಳಲ್ಲಿ ಕಾಫಿ ಕೆಫೆಗಳನ್ನು ಹೊಂದಿದೆ.
-ಕೋವರ್‌ಕೊಲ್ಲಿ ಇಂದ್ರೇಶ್