ಮಡಿಕೇರಿ, ಡಿ. ೨೬: ತೂಕ್ ಬೊಳಕ್ ಕಲೆ, ಕ್ರೀಡೆ ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ಹುದಿಕೇರಿ ಕೊಡವ ಸಮಾಜದ ಸಹಕಾರದಲ್ಲಿ ವಾಲಗತಾಟ್ ನಮ್ಮೆ ಕಾರ್ಯಕ್ರಮ ವಿಜೃಂಭಣೆಯಿAದ ಜರುಗಿತು.
ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಪಾಲ್ಗೊಂಡಿದ್ದರು. ಹುದಿಕೇರಿ ಕೊಡವ ಸಮಾಜದಲ್ಲಿ ನಡೆದ ಸ್ಪರ್ಧೆ ಜನಮನ ರಂಜಿಸಿತು.
ಕೊಡವ ವಾಲಗತ್ತಾಟ್ ಕಲೆ ಜೀವಂತವಾಗಿರಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ. ಸಾಂಪ್ರದಾಯಿಕ ವಾಲಗತ್ತಾಟ್ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಸಂಸ್ಥೆಯು ಹಲವಾರು ಸಮಯದಿಂದ ಕಲೆ ಕ್ರೀಡೆ ಹಾಗೂ ಸಾಹಿತ್ಯದ ಪ್ರಚಾರಕ್ಕಾಗಿ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದು ನಾಡಿಗೆ ಹಾಗೂ ನಾಡಿನ ಜನತೆಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಇಂತಹ ಕಾರ್ಯಕ್ರಮಗಳು ನಾಡಿನಲ್ಲಿ ಮತ್ತಷ್ಟು ನಡೆಯುವಂತಾಗಬೇಕು. ಹೀಗೆ ಆದಲ್ಲಿ ನಮ್ಮ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಕ್ರೀಡೆಯನ್ನು ಪೋಷಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟಿ. ಶೆಟ್ಟಿಗೇರಿ ಕೊಡುವ ಸಮಾಜದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ಮಾತನಾಡಿ, ವಾಲಗತ್ತಾಟ್ ನೃತ್ಯಕ್ಕೆ ಹೊಸ ಆಯಾಮ ನೀಡುವ ಕೆಲಸ ನಡೆಯುತ್ತಿದೆ ಸಾಂಪ್ರದಾಯಿಕ ಬಾಲಗತಾಟ್ ನಮ್ಮ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ನುಡಿದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೇಶವ ಕಾಮತ್ ಮಾತನಾಡಿ ಕೊಡವ ಭಾಷೆ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು ಅದರಲ್ಲೂ ಕೊಡವ ವಾಲಗಕ್ಕೆ ಮನಸೋಲದವರು ಇಲ್ಲ ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ೧೯೯೫ರಲ್ಲಿ ಅಮ್ಮತ್ತಿ ನರಸ ಮತ್ತು ತಂಡದಿAದ ವಾಲಗದ ಧ್ವನಿ ಮುದ್ರಣ ನಡೆದಿತ್ತು ಎಂದರು. ವಾಲಗ ಅಳಿವಿನಂಚಿನಲ್ಲಿರುವ ಕಲೆಯಾಗಿದ್ದು ಇದನ್ನು ಪೋಷಿಸುವ ಕೆಲಸ ಈ ಕಾರ್ಯಕ್ರಮದಿಂದ ಆಗುತ್ತಿದೆ ಎಂದರು.
ತೂಕ್‌ಬೊಳಕ್ ಕಲೆ, ಕ್ರೀಡೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾನಿ ಕೈಬುಲಿರ ಪಾರ್ವತಿ ಬೋಪಯ್ಯ, ಮಂಡೇಪAಡ ಸುಗುಣ ಮುತ್ತಣ್ಣ, ಬಾನಂಗಡ ಅರುಣ, ಬಯವಂಡ ಮಹಾಬಲ ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೀದೇರಿರ ಸವಿನ್ ತೀರ್ಪುಗಾರರಾಗಿ ಕಾಳಿಮಾಡ ಮೋಟಯ್ಯ, ನಾಣ ಮಂಡ ವೇಣು ಮಾಚಯ್ಯ ಚೀಯಕ್‌ಪೂವಂಡ ದೇವಯ್ಯ ತೀತಿಮಾಡ ಬೋಸು ಪಾಲ್ಗೊಂಡಿದ್ದರು.
ಕೊಡಗಿನ ಪ್ರಸಿದ್ಧ ವಾಲಗ ತಂಡವಾದ ಅಮ್ಮತ್ತಿ ನರಸ ಮತ್ತು ತಂಡದಿAದ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ತೂಕ್‌ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿಯ ಸಂಸ್ಥೆ ಯ, ಸಂಚಾಲಕ ಮುಲ್ಲೇಂಗಡ ಮಧೋಷ್ ಪೂವಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೇವತಿ ಪೂವಯ್ಯ ವಂದಿಸಿದರು. ಸದಸ್ಯರು, ತೂಕ್‌ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ ಪದಾಧಿಕಾರಿಗಳು, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.