ನಾಪೋಕ್ಲು, ಡಿ. ೨೬: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ಕೃಷಿಕ ಚೀಯಕಪೂವಂಡ ಮಿಥುನ್ ಚಂಗಪ್ಪ ಅವರ ಕೃಷಿ ಚಟುವಟಿಕೆಯನ್ನು ಗುರುತಿಸಿ ಕೃಷಿ ಜಾಗರಣ್ ವತಿಯಿಂದ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ-೨೦೨೫ಅನ್ನು ನೀಡಿ ಗೌರವಿಸಲಾಯಿತು.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮಿಥುನ್ ಚಂಗಪ್ಪ ಅವರು ಈ ಪ್ರಶಸ್ತಿಯನ್ನು ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರಿಂದ ಸ್ವೀಕರಿಸಿದರು. ನಾಪೋಕ್ಲುವಿನ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಷನ್ ಮಿಥುನ್ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು.