ಸೋಮವಾರಪೇಟೆ, ಡಿ. ೨೬: ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿ ಬಂಡೆಯ ಮೇಲೆ ತಪಸ್ಸು ಮಾಡಿ “ವಿಶ್ವಗುರು ಭಾರತ” ಎಂಬ ಮಹಾಸಂಕಲ್ಪ ರೂಪಿಸಿದ ಡಿಸೆಂಬರ್ ೨೫ ರ ದಿನವನ್ನು ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಬ್ರಿಗೇಡ್ ರಾಕ್ ಡೇ ಆಗಿ ಆಚರಿಸಲಾಯಿತು. ಈ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗದಡಿ ತರಬೇತಿ ಪಡೆಯುತ್ತಿರುವ ಕರಾಟೆ ವಿದ್ಯಾರ್ಥಿಗಳು ರಾಕ್ ಡೇ ಕಾರ್ಯಕ್ರಮವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಜೀವನ, ಆದರ್ಶಗಳು ಹಾಗೂ ಯುವಶಕ್ತಿಯ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಕರಾಟೆ ಮತ್ತು ಯೋಗ ತರಬೇತಿ ಶಿಕ್ಷಕಿ ಸೀಮಾ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಆತ್ಮಸ್ಥೆöÊರ್ಯ ಮತ್ತು ದೇಶಭಕ್ತಿಯ ಭಾವನೆಗಳನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಕನಸನ್ನು ಸಾಕಾರಗೊಳಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದರು.

ಕರಾಟೆ ವಿದ್ಯಾರ್ಥಿಗಳು ಶಿಸ್ತು, ಧೈರ್ಯ ಮತ್ತು ರಾಷ್ಟçಪ್ರೇಮದ ಸಂದೇಶವನ್ನು ಒಳಗೊಂಡ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. “ವಿಶ್ವಗುರು ಭಾರತ ನಮ್ಮ ಗುರಿ” ಎಂಬ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ದೇಶಸೇವೆಯ ಸಂಕಲ್ಪ ಕೈಗೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸತೀಶ್ ಸಿ.ಎಸ್. ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಜಾನ್ ಪಾವ್ಲ್ ಡಿಸೋಜ ಹಾಗೂ ಶೀಲಾ ಉಪಸ್ಥಿತರಿದ್ದರು.