ಚೆಯ್ಯಂಡಾಣೆ, ಡಿ. ೨೬: ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಎಸ್ಎಫ್) ನಾಪೋಕ್ಲು ಸೆಕ್ಟರ್ನ ೨೦೨೬ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಚೆರಿಯಪರಂಬುವಿನ ಉವೈಸ್ ಸಖಾಫಿ ಆಯ್ಕೆಯಾಗಿದ್ದಾರೆ.
ನಾಪೋಕ್ಲುವಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಹ್ಯಾರಿಸ್ ನಾಪೋಕ್ಲು, ಹಣಕಾಸು ಕಾರ್ಯದರ್ಶಿಯಾಗಿ ಬಿಲಾಲ್ ಕುಂಜಿಲ, ಉಪಾಧ್ಯಕ್ಷರಾಗಿ ಶಂಸೀರ್ ಹಾದಿ ಹೊದವಾಡ ಆಯ್ಕೆಯಾಗಿದ್ದು, ಇವರೊಂದಿಗೆ ೮ ಕಾರ್ಯದರ್ಶಿಗಳು ಮತ್ತು ೧೨ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೂತನ ಸಮಿತಿಗೆ ಆಯ್ಕೆ ಮಾಡಲಾಗಿದೆ.
ಎಸ್ಎಸ್ಎಫ್ ಮಡಿಕೇರಿ ಡಿವಿಷನ್ ಅಧ್ಯಕ್ಷ ರಾಶೀದ್ ಅಹ್ಸನಿ ಅವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಜೀರ್ ಸಖಾಫಿ, ಅಸ್ಕರ್ ಸಖಾಫಿ, ಬಶೀರ್ ಹೊದವಾಡ, ಶಾಫಿ ಕುಂಜಿಲ, ಹ್ಯಾರಿಸ್ ಝುಹ್ರಿ, ಯುನೂಸ್ ನಾಪೋಕ್ಲು, ಖಾಲಿದ್ ಎಮ್ಮೆಮಾಡು ಮತ್ತು ಎಸ್ವೈಎಸ್, ಎಸ್ಎಸ್ಎಫ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.