ಮಡಿಕೇರಿ, ಡಿ. ೨೪ : ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ತಾ. ೨೭ ರಂದು ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಈ. ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿAದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ ೬ ಗಂಟೆಗೆ ನಡೆ ತೆಗೆಯುವುದು, ೬.೫ಕ್ಕೆ ನಿರ್ಮಲ್ಯ ಪೂಜೆ, ೬.೩೦ಕ್ಕೆ ಗಣಪತಿ ಹೋಮ, ೮ ಗಂಟೆಗೆ ಅಷ್ಟಾಭಿಷೇಕ ಸೇವೆ, ೧೦.೩೦ ಗಂಟೆಗೆ ತುಳಸಿ ಸಹಸ್ರನಾಮಾರ್ಚನೆ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆಯಾಗಲಿದೆ.

ಮಧ್ಯಾಹ್ನ ೧ ಗಂಟೆಗೆ ಪಾಲಕೊಂಬು ಪ್ರತಿಷ್ಠಾಪನೆ, ೧.೩೦ ಗಂಟೆಗೆ ತಾಯಂಬಕA (ಚಂಡೆಸೇವೆ) ನಡೆಯಲಿದೆ. ಸಂಜೆ ೪ ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಚಂಡೆ, ಮೇಳದೊಂದಿಗೆ ನಗರದ ಅಶ್ವಿನಿ ಗಣಪತಿ ದೇವಾಲಯದಿಂದ ಮುಖ್ಯಬೀದಿಗಳಲ್ಲಿ ಪಾಲಕೊಂಬು ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯಲ್ಲಿ ಅಯ್ಯಪ್ಪ ಭಕ್ತರು, ಮಹಿಳೆಯರು ಕಳಸದೊಂದಿಗೆ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸಂಜೆ ೬.೩೦ ಗಂಟೆಗೆ ದೀಪಾರಾಧನೆ, ಅಲಂಕಾರ ಪೂಜೆ, ೭.೩೦ ಗಂಟೆಗೆ ಪಡಿ ರಂಗಪೂಜೆ, ದುರ್ಗಾಪೂಜೆ ಹಾಗೂ ಸುಬ್ರಹ್ಮಣ್ಯ ಪೂಜೆ ಜರುಗಲಿದೆ. ರಾತ್ರಿ ೮.೩೦ ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆಯಾಗಲಿದೆ.

ರಾತ್ರಿ ೧೨ ಗಂಟೆಯಿAದ ೨ ಗಂಟೆಯವರೆಗೆ ಅಗ್ನಿಪೂಜೆ ನಡೆಯಲಿದ್ದು, ೨ ಗಂಟೆಯಿAದ ಬೆಳಿಗ್ಗೆ ೫ ಗಂಟೆಯವರೆಗೆ ಪೊಲಿಪಾಟ್, ಪಾಲ್ಕಿಂಡಿ ತಿರಿ ಉಳಿಚಲ್, ವೆಟ್ಟುಂತಡವುA ಜರುಗಲಿದೆ. ಡಿ.೨೮ ರಂದು ಬೆಳಿಗ್ಗೆ ೫.೩೦ ಗಂಟೆಗೆ ಅಗ್ನಿ ಕೊಂಡ ಹಾಯುವ ವಿಧಿ ವಿಧಾನಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿರುವ ಹೇಮಂತ್ ಕುಮಾರ್, ಅನ್ನದಾನ ಸೇವೆಗೆ ಸಹಕಾರ ನೀಡುವವರು ಹೆಚ್ಚಿನ ಮಾಹಿತಿಗೆ ೯೪೪೮೩೦೩೬೦೭, ೯೯೭೨೩೪೪೨೪೩, ೯೭೩೧೦೨೪೦೮೩, ೯೯೮೦೨೬೦೨೮೩ ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.