*ಗೋಣಿಕೊಪ್ಪ, ಡಿ. ೨೪: ಅತ್ಯುತ್ತಮ ಘಟಕ ಮತ್ತು ಅತ್ಯುತ್ತಮ ಘಟಕದ ಅಧ್ಯಕ್ಷ ಎಂಬ ಎರಡು ಪ್ರಶಸ್ತಿಗಳನ್ನು ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪಡೆದುಕೊಂಡಿದೆ.
ಹಾಸನ ಜಿಲ್ಲೆಯ ಹೊಟೇಲ್ ಸುವರ್ಣ ಭವನದಲ್ಲಿ ನಡೆದ ವಲಯ ಮಟ್ಟದ ಸಮ್ಮೇಳನದಲ್ಲಿ ಗೋಣಿಕೊಪ್ಪ ಸೀನಿಯರ್ ಚೇಂಬರ್ ಸಂಸ್ಥೆ, ಅತ್ಯುತ್ತಮ ಕಾರ್ಯ ಚಟುವಟಿಕೆಗಳಿಂದ ಗಮನ ಸೆಳೆದು ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಗೋಣಿಕೊಪ್ಪ ಸೀನಿಯರ್ ಚೇಂಬರ್ ಸಂಸ್ಥೆಯ ಅಧ್ಯಕ್ಷ ಬಿ.ಎನ್. ಪ್ರಕಾಶ್ ಘಟಕದ ಅತ್ಯುತ್ತಮ ಅಧ್ಯಕ್ಷ ಎಂಬ ಪ್ರಶಸ್ತಿಯನ್ನು ಗಳಿಸಿಕೊಂಡರು. ಸಮಾಜ ಮುಖಿಯಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗಮನ ಸೆಳೆದ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಗೋಣಿಕೊಪ್ಪ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾಗೇಶ್ ವರ್ಣೇಕರ್ ಸಂಸ್ಥೆಯ ಪರವಾಗಿ ಸ್ವೀಕರಿಸಿದರು.
ರಾಷ್ಟಿçÃಯ ಅಧ್ಯಕ್ಷ ಎಂ.ಆರ್. ಜಯೇಶ್, ಮುಖ್ಯ ಭಾಷಣಕಾರಾಗಿದ್ದ ಎಂ.ಕೆ. ಗೋವರ್ಧನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ವಾಸುದೇವನ್, ಖಜಾಂಚಿ ಸಂಪತ್ ಕುಮಾರ್, ಪ್ರಮುಖರುಗಳಾದ ಗೀತಾಲತ, ಚಿತ್ರಕುಮಾರ್, ಡಾ. ಅರವಿಂದ್‌ರಾವ್, ಜಗದೀಶ್ ವಿ.ಎನ್., ನಾಗೇಶ್, ರವಿ ಕೆ.ಎನ್., ಗಿರೀಶ್‌ಗೌಡ, ಭಾನುಮತಿ, ಹಲವರು ಇದ್ದರು.