ಮಡಿಕೇರಿ, ಡಿ. ೨೪ : ವೀರಾಜಪೇಟೆಯ ಮಾಜಿ ಸೈನಿಕರ ಸಂಘದ ಮೂರನೇ ಮಹಡಿಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಹಣಕಾಸು ನೆರವು ಕೇಳಿದ್ದು, ಸರ್ಕಾರದ ವತಿಯಿಂದ ಹಣ ಬರುವುದು ಸ್ವಲ್ಪ ವಿಳಂಬ ಆಗಬಹುದು ಎಂಬ ಕಾರಣದಿಂದಾಗಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು, ವೈಯಕ್ತಿಕವಾಗಿ ರೂ. ೧ ಲಕ್ಷ ಹಣವನ್ನು ಈ ಕಾಮಗಾರಿ ಮುಂದುವರೆಯಲು ನೀಡಿದ್ದಾರೆ.
ಈ ಹಿನ್ನೆಲೆ ಇಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರು, ಶಾಸಕರ ಗೃಹ ಕಚೇರಿಯಲ್ಲಿ ಶಾಸಕರಿಗೆ ಸನ್ಮಾನ ಮಾಡಿದರು.
ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಜೋಕಿಂ, ಬಟ್ಟಕಾಳಂಡ ರಾಜ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ, ಮಂಜುನಾಥ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಮಾಜಿ ಸೈನಿಕರ ಸಂಘದ ಚಪ್ಪಂಡ ಹರೀಶ್, ಪುಗ್ಗೆರ ನಂದ, ತೋರೆರ ಪೂವಯ್ಯ, ಬಾಳೆಕುಟ್ಟಿರ ದಿನಿ, ಎಚ್.ಕೆ. ಅಪ್ಪಯ್ಯ, ಸಲಾಂ ಕಡಂಗ, ಸುಬ್ಬಯ್ಯ, ರತ್ನ ಸೇರಿದಂತೆ ಅನೇಕ ಮಾಜಿ ಸೈನಿಕರು ಹಾಜರಿದ್ದರು.