ಮಡಿಕೇರಿ, ಡಿ. ೨೪: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ಇರುವ ಪುಟ್ಟ ಚಿಣ್ಣರಿಗೆ ಇಲ್ಲಿನ ಅಗಸ್ತö್ಯ ಕೆಫೆಯಲ್ಲಿ ಬಣ್ಣದ ಶಿಬಿರ ಏರ್ಪಡಿಸಲಾಗಿತ್ತು. ಚಿಣ್ಣರ ಕೈಗೆ ವಿವಿಧ ಆಕಾರದ ಕುಕ್ಕೀಸ್‌ಗಳನ್ನು (ಬಿಸ್ಕತ್ತುಗಳು) ನೀಡಿ, ಅವಕ್ಕೆ ಬೇಕರಿ ಇತ್ಯಾದಿಗಳಲ್ಲಿ ಬಳಸುವ ಸಿಹಿ ಬಣ್ಣ, ಸಿರಪ್, ಐಸಿಂಗ್ ಇತ್ಯಾದಿಗಳನ್ನು ನೀಡಲಾಗಿತ್ತು. ಮಕ್ಕಳು ಮನಕ್ಕೆ ತೋಚಿದಂತೆ ವಿವಿಧ ವಿನ್ಯಾಸಗಳನ್ನು ರಚಿಸಿ, ಪರಸ್ಪರರೊಡನೆ ಹಂಚಿ, ತಿಂದು ಸಂಭ್ರಮಿಸಿದರು. ಶಿಬಿರವನ್ನು ಅಗಸ್ತö್ಯ ಕೆಫೆಯ ಮಾಲೀಕರಾದ ಶಬರಿ ಮೇದಪ್ಪ ಹಾಗೂ ವೃಂದದವರು ಏರ್ಪಡಿಸಿದ್ದರು.