ಮಡಿಕೇರಿ, ಡಿ. ೨೪: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು, ಮಡಿಕೇರಿ ವತಿಯಿಂದ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಗೊಂಡ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ೨೦೨೬ ರ ಜನವರಿ ೧೮ರ ಒಳಗಾಗಿ ತೇರ್ಗಡೆಗೊಂಡ ತಮ್ಮ ಅಂಕ ಪಟ್ಟಿಗಳ ಜೆರಾಕ್ಸ್ ಪ್ರತಿಯನ್ನು ನಿಧಿಯ ಕಚೇರಿಗೆ ಅಥವಾ ಜಗದೀಶ್ ಬಿ.ಕೆ -೯೪೪೮೨೦೬೬೮೮, ಸುಧೀರ್ ಕುಮಾರ್- ೯೪೮೩೩೩೩೦೦೭ಅಥವಾ ರಾಜಶೇಖರ್-೯೪೪೮೦೭೪೨೨೬ ಅವರುಗಳಿಗೆ ತಲುಪಿಸುವಂತೆ ಪ್ರಕಟಣೆ ಕೋರಿದೆ.