ಮಡಿಕೇರಿ, ಡಿ. ೨೪: ರಾಜ್ಯಮಟ್ಟದ ಮಿಸ್ಟರ್ ಫಿಟ್ನೆಸ್ ಮಂತ್ರ ಕ್ಲಾಸಿಕ್ ೨೦೨೫, ದೇಹದಾರ್ಢ್ಯ ಸ್ಪರ್ಧೆಯು ಗೋಣಿಕೊಪ್ಪದಲ್ಲಿ ನಡೆಯಿತು.

ಗೋಣಿಕೊಪ್ಪಲು ಮಿಸ್ಟರ್ ಕಾಫಿ ನಾಡು, ಕರ್ನಾಟಕ ಅಮೆಚೂರು ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ಈ ಸ್ಪರ್ಧೆಯ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹಾಗೂ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ ಅವರು ಭಾಗವಹಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು, ಆಯೋಜಕರಾದ ರಫೀಕ್, ಕಾವ್ಯ ಹಾಗೂ ಸದಸ್ಯರು, ಪದಾಧಿಕಾರಿಗಳು, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರೀರ ನವೀನ್, ನಟ ಭುವನ್ ಪೊನ್ನಣ್ಣ, ಡಿಸಿಸಿ ಸದಸ್ಯ ಮುಕ್ಕಾಟಿರ ಸಂದೀಪ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆಲಿರ ರಶೀದ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.