ಚೆಯ್ಯಂಡಾಣೆ, ಡಿ. ೨೪: ಸಮಸ್ತ ಕೇರಳ ಜಂಇ ಯ್ಯತುಲ್ ಉಲಮಾ ಸೆಂಟಿನರಿಯ ಅಂಗವಾಗಿ ೪೦ ಕೇಂದ್ರಗಳಲ್ಲಿ ನಡೆಯುವ ಮುಅಲ್ಲಿಂ ಸಮ್ಮೇಳನದ ಅಂಗವಾಗಿ ಕೊಡಗು ಜಿಲ್ಲಾ ಮುಅಲ್ಲಿಂ ಸಮ್ಮೇಳನವು ಗದ್ದೆಹಳ್ಳ ಎಸ್.ಎಸ್, ಇಂಟರ್‌ನ್ಯಾಷನಲ್ ಹಾಲ್‌ನಲ್ಲಿ ಜರುಗಿತು.

ಎಸ್.ಜೆ.ಎಂ. ಜಿಲ್ಲಾ ಮಿಶನರಿ ಅಧ್ಯಕ್ಷರಾದ ಹಮೀದ್ ಸಖಾಫಿ ಧ್ವಜಾರೋಹಣ ನೆರವೇರಿಸಿದರು. ಎಮ್ಮೆಮಾಡು ರೇಂಜ್ ಕೋಶಾಧಿಕಾರಿ ಸಯ್ಯದ್ ಅಬ್ದುಲ್ ಅಝೀಝ್ ಅಲ್ ಐದರೂಸಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಸ್.ಜೆ.ಎಂ. ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಜೆ.ಎಂ. ರಾಜ್ಯಾಧ್ಯಕ್ಷ ಅಬ್ದುಲ್ ರಹ್ಮನ್ ಮದನಿ ಜೆಪ್ಪು ಉದ್ಘಾಟಿಸಿದರು.

"ಸಮಸ್ತ ಹಾದು ಬಂದ ಹಾದಿ" ಎಂಬ ವಿಷಯದಲ್ಲಿ ಲೇಖಕ ಓ.ಎಂ. ತರುವಣ ಹಾಗೂ "ಅಧ್ಯಾಪನ ಸೇವೆಯಾಗಿದೆ" ಎಂಬ ಶೀರ್ಷಿಕೆಯಲ್ಲಿ ಅಬ್ದುಲ್ ರಶೀದ್ ಸಖಾಫಿ ಮೆರುವಂಬಾಯಿ ವಿಷಯ ಮಂಡಿಸಿದರು.

ಕೆ.ಎA.ಜೆ. ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಸುಂಟಿಕೊಪ್ಪ, ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಎಸ್.ವೈ.ಎಸ್. ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಯಾಕೂಬ್ ಮಾಸ್ಟರ್, ಎಸ್.ಎಸ್.ಎಫ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಎಸ್.ಜೆ.ಎಂ. ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮದನಿ ಶುಭ ಹಾರೈಸಿ ಮಾತನಾಡಿದರು.

ಕೆ.ಎಂ.ಜೆ. ಕೋಶಾಧಿಕಾರಿ ಖಾಲಿದ್ ಫೈಝಿ, ಎಸ್.ವೈ.ಎಸ್. ಜಿಲ್ಲಾ ಕೋಶಾಧಿಕಾರಿ ಶರೀಫ್, ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಖಮರುದ್ದೀನ್ ಸಖಾಫಿ, ಕೋಶಾಧಿಕಾರಿ ನವಾಝ್ ಮದನಿ, ಮರ್ಕಝುಲ್ ಹಿದಾಯ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ, ಗದ್ದೆಹಳ್ಳ ಜಮಾಅತ್ ಅಧ್ಯಕ್ಷ ಇಬ್ರಾಹಿಂ, ಎಸ್.ಜೆ.ಎಂ. ಜಿಲ್ಲಾ ಕೋಶಾಧಿಕಾರಿ ಅಶ್ರಫ್ ಸಖಾಫಿ, ಸುಂಟಿಕೊಪ್ಪ ಸುನ್ನೀ ಮುಸ್ಲಿಂ ಜಮಾಅತ್ ಖತೀಬ್ ಇಬ್ರಾಹಿಂ ಅಹ್ಸನಿ ಸೇರಿದಂತೆ ಸುನ್ನೀ ಸಂಘ ಕುಟುಂಬದ ಹಲವಾರು ನಾಯಕರುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ೬ ರೇಂಜ್‌ಗಳಿAದ ೨೫೦ಕ್ಕೂ ಹೆಚ್ಚು ಮುಅಲ್ಲಿಂ ಪ್ರತಿನಿಧಿಗಳು ಪಾಲ್ಗೊಂಡಿದರು. ಜಿಲ್ಲಾ ಮಿಷನರಿ ಕಾರ್ಯದರ್ಶಿ ಅಹ್ಮದ್ ಮದನಿ ಸ್ವಾಗತಿಸಿ,ಜಿಲ್ಲಾ ಪರೀಕ್ಷಾ ವಿಭಾಗ ಕಾರ್ಯದರ್ಶಿ ಹಂಝ ರಹ್ಮಾನಿ ವಂದಸಿದರು.