ಪೊನ್ನಂಪೇಟೆ, ಡಿ. ೨೪: ಪೊನ್ನಂಪೇಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ತಾ. ೨೭ ರಂದು ನಡೆಯಲಿದೆ.
ಬೆಳಗ್ಗೆ ೫.೩೦ಕ್ಕೆ ಉಷಾ ಪೂಜೆ, ಬೆ. ೭ಕ್ಕೆ ಮಹಾಗಣಪತಿ ಹೋಮ, ಬೆ. ೯ಕ್ಕೆ ಚಂಡೆ ಮೇಳ, ಬೆ. ೧೦ಕ್ಕೆ ಅಭಿಷೇಕ ಪೂಜೆ, ಬೆ. ೧೧ಕ್ಕೆ ಮಾಲೆ ಹಾಕಿದ ಸ್ವಾಮಿಗಳಿಂದ ಭಜನೆ, ಬೆ. ೧೨ಕ್ಕೆ ದೀಪರಾಧನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮ. ೧ಕ್ಕೆ ಅನ್ನಸಂತರ್ಪಣೆ, ಮ. ೩ಕ್ಕೆ ಪೊನ್ನಂಪೇಟೆ ರಾಜಬೀದಿಯಲ್ಲಿ ಸ್ವಾಮಿಯ ಭವ್ಯ ಮೆರವಣಿಗೆ, ಸಂಜೆ ೭ ಗಂಟೆಗೆ ಸುವೃತ ನಾಟ್ಯಾಲಯ ತಂಡದಿAದ ನೃತ್ಯ ಕಾರ್ಯಕ್ರಮ ನಡೆಯಲಿದೆ.