ನಾಪೋಕ್ಲು, ಡಿ. ೧೩: ಸಮೀಪದ ಬೇತು ಗ್ರಾಮದಲ್ಲಿರುವ ಕೊಡಗಿನ ಪುರಾಣ ಪ್ರಸಿದ್ಧ ಮಕ್ಕಿ ಶಾಸ್ತಾವು ದೇವಾಲಯದಲ್ಲಿ ಮಣ್ಣಿನ ನಾಯಿ ಹರಕೆಯ ರೂಪದಲ್ಲಿ ಒಪ್ಪಿಸುವ ಆಚರಣೆ ತಾ. ೧೫ ರಿಂದ ಆರಂಭವಾಗಲಿದೆ.
ಮಕ್ಕಿ ಎಂದರೆ ಸತ್ಯ ಎಂಬ ಮಾತು ಈ ಭಾಗದ ಜನರ ಮನದಲ್ಲಿ ಬೇರೂರಿದೆ. ಇಲ್ಲಿ ಹೆಚ್ಚಾಗಿ ಪ್ರಮಾಣ, ಇತ್ಯಾರ್ಥಗಳು ನಡೆಯುವುದು ವಾಡಿಕೆಯಾಗಿದೆ. ಶಾಸ್ತಾವು ದೇವರ ಜತೆ ಅಜ್ಜಪ್ಪ ಮತ್ತು ವಿಷ್ಣುಮೂರ್ತಿ (ಭೂತ) ದೈವಗಳ ನೆಲೆ ಕೂಡ ಇಲ್ಲಿದೆ.
ಇಲ್ಲಿ ವರ್ಷಕ್ಕೆರಡು ಬಾರಿ ವಿಶಿಷ್ಟ ಹಬ್ಬ ನಡೆಯುತ್ತದೆ. ಸಣ್ಣ ಹಬ್ಬ ತಾ. ೧೫ ರಿಂದ ಆರಂಭಗೊAಡರೆ, ದೊಡ್ಡ ಹಬ್ಬ ಮೇ ತಿಂಗಳ ೨ ರಿಂದ ೪ ರವರೆಗೆ ನಡೆಯುತ್ತದೆ.
ಹರಕೆಯ ಮಣ್ಣಿನ ನಾಯಿ ಒಪ್ಪಿಸುವುದು, ದೀಪರಾಧನೆ, ಅಜ್ಜಪ್ಪ ಮತ್ತು ವಿಷ್ಣುಮೂರ್ತಿ ಕೋಲಗಳು ಈ ಹಬ್ಬದ ಪ್ರಾಮುಖ್ಯತೆಯಾಗಿದೆ.
ಇಲ್ಲಿ ಅರ್ಪಿಸಲಾಗುತ್ತಿರುವ ಮಣ್ಣಿನ ನಾಯಿಯ ಹರಕೆ ಬಹಳ ವಿಶೇಷ ಹಾಗೂ ಅಪರೂಪವಾಗಿದೆ. ತಮ್ಮ ಸಾಕು ಪ್ರಾಣಿಗಳಿಗೆ ತೊಂದರೆಯಾದರೆ ಮಣ್ಣಿನ ನಾಯಿಯ ಹರಕೆಯನ್ನು ನೀಡುವುದು ಕಾಣಬಹುದಾಗಿದೆ ಹಾಗೂ ಇಷ್ಟಾರ್ಥ ಸಿದ್ಧಿಗೂ ಮಣ್ಣಿನ ನಾಯಿಯ ಹರಕೆ ರೂಪದಲ್ಲಿ ದೇವರಿಗೆ ಒಪ್ಪಿಸುತ್ತಾರೆ.
ಈ ಹಬ್ಬ ತಾ. ೧೫ ರಿಂದ ೧೯ ರವರೆಗೆ ನಡೆಯಲಿದೆ. ತಾ. ೧೫ ರಂದು ದೇವಸ್ಥಾನದಲ್ಲಿ ಮಣ್ಣಿನ ಕಲಾಕೃತಿ (ನಾಯಿ ಹರಕೆ) ಒಪ್ಪಿಸುವುದು. ತಾ. ೧೭ ಕೊಟ್ಟಿಪಾಡುವುದು. ತಾ. ೧೮ ರಂದು ರಾತ್ರಿ ದೀಪಾರಾದನೆ. (ಅಂದಿ ಬೊಳಕ್) ನಡೆಯಲಿದೆ. ಆನಂತರ ಕರಿಬಾಳೆ, ಕುಟ್ಟಿಚಾತ, ನುಚ್ಚುಟ್ಟೆ ಕೋಲಗಳು ನಡೆಯುತ್ತವೆ. ತಾ. ೧೯ ರಂದು ಪೂರ್ವಾಹ್ನ ಅಜ್ಜಪ್ಪ ಕೋಲ ಹಾಗೂ ಅಪರಾಹ್ನ ವಿಷ್ಣುಮೂರ್ತಿ ಕೋಲಗಳು ನಡೆಯುತ್ತದೆ. ಈ ಹಬ್ಬವನ್ನು ಭಕ್ತ್ತಾದಿಗಳಿಗೆ ಅನ್ನಸಂತರ್ಪಣೆಯೊAದಿಗೆ ವಿಜೃಂಭಣೆಯಿAದ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ.