ಕೂಡಿಗೆ, ಡಿ. ೧೨: ಕಾರ್ಮಿಕರ ಕೊರತೆಯಿಂದ ಹೊರ ರಾಜ್ಯ ಕಾರ್ಮಿಕ ರನ್ನು ಹೆಚ್ಚಾಗಿ ಕೆಲಸಕ್ಕೆ ಅವಲಂಬಿಸಲಾಗಿದೆ. ಹಾರಂಗಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಭತ್ತದ ಬೆಳೆಯ ಕಟಾವಿಗೆ ಕಾರ್ಮಿಕರ ಸಮಸ್ಯೆ ಯಿಂದಾಗಿ ಈ ಭಾಗದ ಅನೇಕ ರೈತರು ಭತ್ತದ ಕಟಾವು ಯಂತ್ರಗಳನ್ನು ಬಳಕೆ ಮಾಡಿಕೊಂಡು ಕಟಾವು ಕೆಲಸವನ್ನು ಆರಂಭಿಸಿದ್ದಾರೆ. ಈ ವ್ಯಾಪ್ತಿಯ ರೈತರು ಜಿಲ್ಲೆಯ, ಮತ್ತು ಪಕ್ಕದ ಜಿಲ್ಲೆಯ ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಮತ್ತು ಸರಕಾರದ ಸಹಾಯಧನ ಯೋಜನೆಯಡಿಯಲ್ಲಿ ಪಡೆದಿರುವ ಕೃಷಿ ಯಂತ್ರೋಪಕರಣಗಳನ್ನು ಕೇಂದ್ರದ ಮೂಲಕ ಬಾಡಿಗೆ ಪಡೆದು ಕಟಾವು ಮಾಡುವಲ್ಲಿ ತೊಡಗಿದ್ದಾರೆ.

ತಮಿಳುನಾಡಿನ ಕಡೆಗಳಿಂದ ಬಂದಿರುವ ದೊಡ್ಡ ಪ್ರಮಾಣದ ಯಂತ್ರಗಳು ಭತ್ತದ ಗದ್ದೆಗಳಲ್ಲಿ ಬೆಳೆಯನ್ನು ಕಟಾವು ಮಾಡಿದರೆ, ಭತ್ತದ ಕಾಳುಗಳ ಸಿಕ್ಕಿದರೂ, ಅದರ ಹುಲ್ಲು ಮಾತ್ರ ಪುಡಿಯಾಗಿ ಹೋಗುತ್ತಿತ್ತು. ಇದರಿಂದಾಗಿ ರೈತರ ಹೈನುಗಾರಿಕೆಗೆ ಪ್ರಮುಖವಾಗಿ ಬೇಕಾಗುವ ಹುಲ್ಲು ಹಾಳಾಗುತ್ತಿತು. ಇದೀಗ ಭತ್ತದ, ಕಾಳುಗಳು, ಹುಲ್ಲು ಸುರಕ್ಷಿತವಾಗಿ ದೊರಕುವುದರಿಂದ ಈ ಸಾಲಿನಲ್ಲಿ ಹೆಚ್ಚು ರೈತರು ಭತ್ತದ ಬೆಳೆಯ ಚಿಕ್ಕ ಯಂತ್ರದ ಮೊರೆ ಹೋಗಿರುವುದು ಕಂಡುಬರುತ್ತಿದೆ.

- ಕೆ.ಕೆ. ನಾಗರಾಜಶೆಟ್ಟಿ.