ವೀರಾಜಪೇಟೆ, ಡಿ. ೧೨ : ಕೇರಳದ ಕುನ್ನತುರ್ ಶ್ರೀ ಮುತ್ತಪ್ಪನ್ ದೇವಾಲಯ ಪಯಸಿಕೇರಿ ಕಣ್ಣೂರು ಇದರ ಕುನ್ನತುರ್ ಪಾಡಿ ತಿರುವಪ್ಪನ್ ಮಹೋತ್ಸವ ತಾ. ೧೭ರಿಂದ ಜನವರಿ ೧೫ ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ.

ಇದು ಕಾಡಿನ ಬೆಟ್ಟದಲ್ಲಿ ನಡೆಯುವ ಕೇರಳದ ವಿಶಿಷ್ಟ ಉತ್ಸವಗಳಲ್ಲಿ ಒಂದಾಗಿದೆ ಎಂದು ದೇವಾಲಯ ಟ್ರಸ್ಟ್ನ ಅಧ್ಯಕ್ಷ ಕುಂಞÂರಾಮನ್ ನಾಯರ್ ಹೇಳಿದರು.

ವೀರಾಜಪೇಟೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು ತಿರುವಪ್ಪನ್ ಉತ್ಸವದ ಬಳಿಕ ಜನ ಪ್ರವೇಶ ಇಲ್ಲದ ಪ್ರದೇಶವಾದ ಬೆಟ್ಟದಲ್ಲಿ ಉತ್ಸವ ಸಂದರ್ಭ ಹಲ್ಲು ಇಟಾ (ಛಾವಣಿ) ತೆಂಗಿನ ಗರಿ ಓಲೆ ಉಪಯೋಗಿಸಿ ತಾತ್ಕಾಲಿಕ ಮಠಪುರ ನಿರ್ಮಿಸಿ ಪಾಡಿ ಕೆಲಸ ಎಂಬ ಹೆಸರಿನಲ್ಲಿ ಗುರುತಿಸುವ ಆಚರಣೆಯಾಗಿದೆ. ತಾ. ೧೭ ರಂದು ಬೆಟ್ಟದ ಕೆಳಗಿರುವ ಮಠಪುರದಲ್ಲಿ ತಂತ್ರಿ ಪೆರಕುಳತ್ತಿಲ್ಲತ್ ಸುಬ್ರಮಣ್ಯನ್ ನಂಬೂದರಿ ಪಾಡ್ ಅವರ ಅಧಿನತ್ವದಲ್ಲಿ ಗಣಪತಿ ಹೋಮ, ಶುದ್ಧಿ ವಾಸ್ತುಬಲಿ ಭಗವತಿ ಸೇವೆ ಎಂಬ ಆಚರಣೆ ನಡೆಯುತ್ತದೆ. ಬಳಿಕ ಕೋಮರ ಕೋಲದ ನಂತರ ಪೈಂಗುತ್ತಿ ಅಂಜಿಲ ಅಡಿಯಮಾರ್ ಎರಡು ಭಾಗದಲ್ಲಿ ಪಂಜು ಹಿಡಿದು ಕಳಿಪಾಟ್‌ನೊಂದಿಗೆ ಪಾಡಿಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ಕಳಿಪಾಟ್ ವಾನವರ್ ಅಡಿಯಂದಿರಕಾರ್ ಸಹ ಇಲ್ಲಿಗೆ ಸೇರುತ್ತಾರೆ. ಈ ಸಮಯದಲ್ಲಿ ತಿರುವಾಭರಣ ಮತ್ತು ಭಂಡಾರ ಸಹ ಪಾಡಿಗೆ ಬರುತ್ತದೆ.

ಈ ಬಳಿಕ ತಂತ್ರಿಗಳ ಶುದ್ದಿ ೨೫ ಕಳಸ ಪೂಜೆ ಇನ್ನಿತರ ಪೂಜೆಗಳು ನಡೆಯುತ್ತದೆ. ಮುಂದಕ್ಕೆ ಅಡಿಯಂದಿರ ಪ್ರಾರಂಭಿಸುವುದಕ್ಕೆ ತಂತ್ರಿ ಅನುಮತಿಯೊಂದಿಗೆ ವಾನವರ್ ಅವರು ಕಂಗಾಣಿ ಅರೆಯಲ್ ದೀಪ ಬೆಳಗುವುದರೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯುತ್ತದೆ ಎಂದರು.

ಮೊದಲ ದಿನ ತಾ. ೧೭ ರಂದು ರಾತ್ರಿ ಮುತ್ತಪ್ಪನ್ ಜೀವನದ ನಾಲ್ಕು ಭಾಗವಾದ ಬಾಲ್ಯ ಕೌಮಾರ ಗಾರ್‌ಗಾಸ್ತಂ ವಾನಪ್ರಸ್ತಂ ಎನ್ನುವುದನ್ನು ಪ್ರತಿನಿಧಿಸುವ ಹೊಸ ಶ್ರೀ ಮುತ್ತಪ್ಪನ್ ಪೊರಂಗಾಲ ನಾಡುವಾಯಿಸನ್ ದೇವರು ಹಾಗೂ ತಿರುಪ್ಪನ್ ಕೋಲ ನಡೆಯುತ್ತದೆ. ಇನ್ನಿತರ ದಿನದಲ್ಲಿ ಪ್ರತಿ ಸಂಜೆ ಉಟು ವೆಳ್ಳಾಟಂ ರಾತ್ರಿ ತಿರುಪ್ಪನ್ ಪ್ರಾತಃ ಕಾಲದಲ್ಲಿ ವೆಳ್ಳಾಟಂ ಇರುತ್ತದೆ. ಮುತ್ತಪ್ಪನ್ ತಿಳಿಸುವ ಸಮಯದಲ್ಲಿ ಮೂಲಂ ಪೆಟ್ಟ ಭಗವತಿ ಕೋಲ ಇರುತ್ತದೆ. ಉತ್ಸವ ಕಾಲದಲ್ಲಿ ಭಕ್ತರಿಗೆ ೨೪ ಗಂಟೆ ಪ್ರವೇಶಾವಕಾಶ ಇರುತ್ತದೆ. ಜೊತೆಗೆ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಕೆಳಗಿನ ಮಠದ ಭೋಜನ ಶಾಲೆಯಲ್ಲಿ ಅನ್ನದಾನದ ವ್ಯವಸ್ಥೆ ಇರುತ್ತದೆ. ಆದರಿಂದ ಕೊಡಗಿನ ಭಕ್ತ ಜನರು ಈ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸುವಂತೆ ಕುಞÂರಾಮನ್ ನಾಯರ್ ಕೋರಿದರು.

ಈ ಸಂದರ್ಭ ಕೋಮರತಚ್ಚನ್ ರಾಜನ್ ನಂಬಿಯಾರ್, ಟ್ರಸ್ಟ್ ಸದಸ್ಯರಾದ ರಾಜೇಶ್ ಕೊಲ್ಲರೈತ್, ಹರೀಶ್ ಅಮ್ಮತ್ತಿ ಉಪಸ್ಥಿತರಿದ್ದರು.

ಇದೇ ಸಂದರ್ಭ ಕೋಮರತಚ್ಚನ್ ರಾಜನ್ ನಂಬಿಯಾರ್ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ, ಗೌರವಿಸಿದರು.