ಮಡಿಕೇರಿ, ಡಿ. ೧೨: ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗ, ಉಡುಪಿಯ ಪೂರ್ಣಪ್ರಜ್ಞ ಕಾಲೇಜುಗಳ ಸಂಯುಕ್ತ ಆಶ್ರÀ್ರಯದಲ್ಲಿ, ಉಡುಪಿಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ, ವಿಜೇತರಾದ ಕೊಡಗು ಜಿಲ್ಲೆಯ ೮ ಮಂದಿ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅರ್ವತ್ತೊಕ್ಲಿನ ವಿದ್ಯಾನಿಕೇತನ ಪ.ಪೂ. ಕಾಲೇಜು ಪ್ರಥಮ ಪಿ ಯು ಸಿ ಯ ಎಂ. ಹರಿಕೃಷ್ಣನ್ ಪ್ರಥಮ ಸ್ಥಾನ ಗಳಿಸಿದ್ದಾನೆ.
ಇದೇ ಕಾಲೇಜಿನ ಗುಡ್ಡಂಡ ಕಾರ್ಯಪ್ಪ ದ್ವಿತೀಯ ಪಿ.ಯು.ಸಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
ಚರ್ಚಾ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸಿಐಟಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪುಗ್ಗೇರ ಕ್ಷಮಾ ಕಾವೇರಮ್ಮ ದ್ವಿತೀಯ, ಜನಪದ ನೃತ್ಯ ವಿಭಾಗದಲ್ಲಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಇಂಚರ ಎ. ತೃತೀಯ, ಕುಶಾಲನಗರ ಸರ್ಕಾರಿ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅರಬಿಯಾ, ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ, ಭಾವಗೀತೆಯಲ್ಲಿ ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಪ್ರಗತಿ ಬಡಿಗೇರ್ ತೃತೀಯ, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಕೂಡಿಗೆ ಸರ್ಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹೆಚ್.ಆರ್. ರಾಜೇಶ್ ದ್ವಿತೀಯ, ಚಿತ್ರಕಲೆಯಲ್ಲಿ ಕುಶಾಲನಗರ ಕನ್ನಡ ಭಾರತಿ ಪ.ಪೂ. ಕಾಲೇಜಿನ ಎಂ. ವಿಸ್ಮಯ ತೃತೀಯ, ಸ್ಥಾನ ಪಡೆದಿದ್ದಾಳೆ.
ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಕೊಡಗಿನಿಂದ ವ್ಯವಸ್ಥಾಪಕರಾಗಿ ಡಿ.ಎನ್. ಕುಮಾರ್ ಹಾಗೂ ಜಿ.ಡಿ. ನಂದಿನಿ ವಿದ್ಯಾರ್ಥಿಗಳ ಉಸ್ತುವಾರಿ ವಹಿಸಿಕೊಂಡಿದ್ದರು.
ವಿಜೇತ ವಿದ್ಯಾರ್ಥಿಗಳು ತಾ. ೧೫ರಂದು ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.