ಸೋಮವಾರಪೇಟೆ, ಡಿ. ೧೧: ಅಬ್ಬೂರುಕಟ್ಟೆಯಿಂದ ಬಾಣಾವರದ ಕಡೆಗೆ ತೆರಳುತ್ತಿದ್ದ ಕ್ರೆಟಾ ಕಾರು ಹಾಗೂ ಬಾಣಾವರದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಬ್ರೀಜಾ ಕಾರಿನ ನಡುವೆ ಗೋಣಿಮರೂರು-ಅಬ್ಬೂರುಕಟ್ಟೆ ನಡುವಿನ ಅರಣ್ಯ ಪ್ರದೇಶದ ರಸ್ತೆಯ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಚಿಕ್ಕಬ್ಬೂರು ಗ್ರಾಮದ ಪ್ರಸಾದ್ ಅವರು ತಮಗೆ ಸೇರಿದ ಕ್ರೇಟಾ ಕಾರಿನಲ್ಲಿ ಬಾಣಾವರ ರಸ್ತೆಯಲ್ಲಿ ತೆರಳುತ್ತಿದ್ದ ಸಂದÀರ್ಭ, ಅರಣ್ಯ ಪ್ರದೇಶದ ತಿರುವಿನಲ್ಲಿ ಗರ್ವಾಲೆ ಗ್ರಾಮದ ಎಂ.ಬಿ. ಸುಬ್ಬಯ್ಯ ಅವರು ಚಾಲಿಸುತ್ತಿದ್ದ ಬ್ರೀಜಾ ಕಾರಿಗೆ ಡಿಕ್ಕಿಯಾಗಿದೆ. ಘಟನೆಯಿಂದ ಎರಡೂ ಕಾರಿನ ಮುಂಭಾಗ ಜಖಂಗೊAಡಿದ್ದು, ಏರ್ ಬ್ಯಾಗ್ ತೆರೆದುಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.