ಜಪಾನ್, ಡಿ. ೧೧ : ಅಮೇರಿಕಾದ ವಾಯುವ್ಯ (ನಾರ್ತ್ ವೆಸ್ಟ್) ರಾಜ್ಯ ಅಲಾಸ್ಕಾ ಹಾಗೂ ದ್ವೀಪ ರಾಷ್ಟç ಜಪಾನ್‌ನಲ್ಲಿ ೩ ದಿನಗಳ ಅಂತರದಲ್ಲಿ ಮ್ಯಾಗ್ನಿಟ್ಯೂಡ್ ೭ ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.

ತಾ.೬ ರಂದು ಅಲಾಸ್ಕಾದ ನಿರ್ಜನ ಪ್ರದೇಶದಲ್ಲಿ ಮ್ಯಾಗ್ನಿಟ್ಯೂಡ್ ೭ ಹಾಗೂ ಜಪಾನಿನಲ್ಲಿ ತಾ. ೮ ರಂದು ೭.೫ ಮ್ಯಾಗ್ನಿಟ್ಯೂಡ್ ಭೂಕಂಪನ ಸಂಭವಿಸಿದ್ದು, ಇನ್ನೊಂದು ವಾರದೊಳಗೆ ಇದಕ್ಕಿಂತಲೂ ಬೃಹತ್ ಭೂಕಂಪನ ಜಪಾನ್‌ನಲ್ಲಿ ಸಂಭವಿಸಿ ಇದರ ಪರಿಣಾಮ ಸುನಾಮಿಯೂ ಸೃಷ್ಟಿಯಾಗಬಹುದೆಂಬ ಎಚ್ಚರಿಕೆಯನ್ನು ರಾಷ್ಟçದ ಹವಾಮಾನ ಇಲಾಖೆೆ ನೀಡಿದೆ.

ತಾ. ೬ ರಂದು ಅಲಾಸ್ಕಾದ ನಿರ್ಜನ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ ಕಾರಣ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ತಾ. ೮ರ ತಡರಾತ್ರಿ ಜಪಾನಿನ ಉತ್ತರ ಭಾಗದ ಆಮೋರಿ ನಗರದ ಪೂರ್ವದಲ್ಲಿನ ಕಡಲ ತೀರದಲ್ಲಿ ೫೪ ಅಡಿ ಆಳದಲ್ಲಿ ೭.೫ ಮ್ಯಾಗ್ನಿಟ್ಯೂಡ್ ಭೂಕಂಪನ ಸಂಭವಿಸಿದೆ. ಪರಿಣಾಮ ೬೦, ೭೦ ಸೆ.ಮೀ ಎತ್ತರದ ಅಲೆಗಳು ದಡ ಸೇರಿ ೩೦ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ೧ ಲಕ್ಷಕ್ಕೂ ಅಧಿಕ ಮಂದಿಯನ್ನು ಆ ಪ್ರದೇಶದಿಂದ ಸ್ಥಳಾಂತರಗೊಳಿಸಲಾಗಿದೆ.

ಕಂಪನ ಹಾಗೂ ಅಲೆಗಳ ರಭಸಕ್ಕೆ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಹಲವು ಕಟ್ಟಡಗಳೂ ಹಾನಿಯಾಗಿವೆ. ಕಂಪನ ಕೇಂದ್ರದಿAದ ೫೫೦ ಕಿ.ಮೀ. ದೂರ ದಕ್ಷಿಣದಲ್ಲಿರುವ ಜಪಾನಿನ ರಾಜಧಾನಿ ಟೋಕಿಯೋದಲ್ಲಿಯೂ ಕಂಪನದ ಅನುಭವವಾಗಿದೆ.

ಹೊಸ ನಿಯಮಗಳ ಪ್ರಕಾರ ೨೦೨೨ರಿಂದ ಜಪಾನಿನ ಹವಾಮಾನ ಇಲಾಖೆಯು, ರಾಷ್ಟçದಲ್ಲಿ ೭ ಮ್ಯಾಗ್ನಿಟ್ಯೂಡ್‌ಗಿಂತಲೂ ಅಧಿಕ ಭೂಕಂಪನ ಸಂಭವಿಸಿದರೆ ಹಾಗೂ ಕಂಪನಗೊAಡ ಸ್ಥಳವು ಗುರುತಿಸಲ್ಪಟ್ಟಿರುವ ಟೆಕ್ಟಾನಿಕ್ ಪ್ಲೇಟ್ (ಈ ಭೂಪದರದ ಭಾಗಗಳು ಮೆಲ್ಲಮೆಲ್ಲನೆ ಸಂಚರಿಸುತ್ತಿರುತ್ತವೆ. ಒಂದಕ್ಕೊAದು ಘರ್ಷಿಸಿದರೆ ಭೂಕಂಪನ ಸಂಭವಿಸುತ್ತದೆ) ಸಂಚಾರದಿAದ ಸೃಷ್ಟಿಯಾಗಿದ್ದರೆ ‘ಬೃಹತ್ ಭೂಕಂಪನ’ ಎಚ್ಚರಿಕೆ ನೀಡುವುದು ಅನಿವಾರ್ಯವಾಗಿದೆ.

ಮೊನ್ನೆ ಸಂಭವಿಸಿದ ಕಂಪನದ ಟಕ್ಟಾನಿಕ್ ಪ್ಲೇಟ್‌ನಲ್ಲಿಯೇ ೮ ಮ್ಯಾಗ್ನಿಟ್ಯೂಡ್‌ಗಿಂತಲೂ ಅಧಿಕವಿರುವ ಕಂಪನ ಸಂಭವಿಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆಯು ನೀಡಿದ್ದು ಇದರ ಸಂಭಾವ್ಯತೆ ಕೇವಲ ಶೇ.೧ ರಷ್ಟಿದೆ. ಆದರೆ ಸಂಭವಿಸಿದ್ದೇ ಆದಲ್ಲಿ ಅಪಾರ ನಷ್ಟ ಉಂಟಾಗಲಿದೆ.

ಈ ಕಂಪನ ಆದಲ್ಲಿ ಜಪಾನ್ ಉತ್ತರ ಭಾಗ, ರಷ್ಯಾ ಹಾಗೂ ಅಮೇರಿಕಾದ ಅಲಾಸ್ಕಾವರೆಗೂ ಸುನಾಮಿ ಅಲೆಗಳು ತಲುಪುವ ಸಾಧ್ಯತೆಗಳಿವೆ.