ಪೊನ್ನಂಪೇಟೆ, ಡಿ. ೧೧: ಗೋಣಿಕೊಪ್ಪಲು ಕಾವೇರಿ ಕಾಲೇಜು ಐಕ್ಯೂಎಸಿ ಹಾಗೂ ಮಾನವ ಹಕ್ಕುಗಳ ಸಂಘದ ವತಿಯಿಂದ ವಿಶ್ವ ಮಾನವ ಹಕ್ಕುಗಳ ದಿನ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಕೀಲ ಕೆ.ಬಿ. ಸಂಜೀವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ಹುಟ್ಟುವ ಮುನ್ನ ಭ್ರೂಣಾವಸ್ಥೆಯಲ್ಲಿರುವಾಗಿನಿಂದಲೇ ಮಾನವ ಹಕ್ಕುಗಳು ಎಲ್ಲಾ ಮಾನವರಲ್ಲಿಯೂ ಅಂತರ್ಗತವಾಗಿರುತ್ತವೆ. ರಾಷ್ಟಿçÃಯತೆ, ವಾಸಸ್ಥಳ, ಲಿಂಗ, ರಾಷ್ಟಿçÃಯ ಅಥವಾ ಜನಾಂಗೀಯ ಮೂಲ, ಬಣ್ಣ, ಧರ್ಮ, ಭಾಷೆ, ಸ್ಥಾನಮಾನ ಯಾವುದೇ ತರಹದ ಏನೇ ಇರಲಿ, ಪ್ರತಿಯೊಬ್ಬ ವ್ಯಕ್ತಿಯು ತಾರತಮ್ಯವಿಲ್ಲದೆ ಮಾನವ ಹಕ್ಕುಗಳನ್ನು ಚಲಾಯಿಸಲು ಅರ್ಹನಾಗಿರುತ್ತಾನೆ.ಮಾನವ ಬದುಕಿಗೆ ಅತ್ಯವಶ್ಯಕವಾಗಿರುವ ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ತಿಳುವಳಿಕೆ ಹೊಂದಿರಬೇಕು ಹಾಗೂ ಇತರರಿಗೆ ಜಾಗೃತಿ ಮೂಡಿಸಬೇಕು ಎಂದರು. ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಮಾತನಾಡಿ, ಭಾರತವು ಆದಿಕಾಲದಿಂದಲೂ ಮಾನವ ಹಕ್ಕುಗಳನ್ನು ಗೌರವಿಸುತ್ತಾ ಬಂದಿದ್ದು, ಆಧುನಿಕ ಶಿಕ್ಷಣ ಪದ್ಧತಿ ಬಂದ ನಂತರ ನಮ್ಮಲ್ಲಿ ಮಾನವ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಲಾರಂಭಿಸಿದೆ ಎಂದರು.

ಈ ಸಂದರ್ಭ ಐಕ್ಯೂಎಸಿ ಸಂಚಾಲಕಿ ಡಾ. ನಯನ ತಮ್ಮಯ್ಯ, ರಾಜ್ಯಶಾಸ್ತç ವಿಭಾಗ ಮುಖ್ಯಸ್ಥೆ ಕೆ.ಟಿ. ಸೀತಮ್ಮ, ರಾಜ್ಯಶಾಸ್ತç ಉಪನ್ಯಾಸಕರಾದ ಡಾ. ಸಿ.ಟಿ. ಕಾವ್ಯ, ಮಂಜುನಾಥ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನ್ಯ ಪ್ರಾಸ್ತಾವಿಕ ಮಾತನಾಡಿ, ಸಹನ ಅತಿಥಿ ಪರಿಚಯ ಮಾಡಿದರು. ಅಭಿಮನ್ಯು ಪ್ರಾರ್ಥಿಸಿ, ಆರ್ಯ ಸ್ವಾಗತಿಸಿ, ದಿವ್ಯ ದರ್ಶಿನಿ ವಂದಿಸಿ, ದೀಪ ಮತ್ತು ಪ್ರಜ್ವಲ್ ನಿರೂಪಿಸಿದರು.