ಮಡಿಕೇರಿ, ಡಿ. ೧೧: ಕರ್ನಾಟಕ ಸರ್ಕಾರದ ಯೋಜನೆಯಂತೆ ತಾಲೂಕು ವ್ಯಾಪ್ತಿಯಲ್ಲಿನ ಇ-ಪೌತಿ ಖಾತೆ ಬದಲಾವಣೆ ಸಂಬAಧ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಪೌತಿ ವಾರಸುದಾರಿಕೆಯ ಖಾತೆಗೆ ಖಾತೆದಾರನ ಮರಣ ದÀÈಢೀಕರಣ ಪತ್ರ, ಒಂದು ವೇಳೆ ಮರಣ ದÀÈಢೀಕರಣ ಲಭ್ಯವಿಲ್ಲದಿದ್ದಲ್ಲಿ ಆಧಾರ್ ಮತ್ತು ಪಡಿತರ ಚೀಟಿ ದಾಖಲೆಗಳಂತೆ ಸಂಬAಧಪಟ್ಟ ವಾರಸುದಾರರಿಂದ ಅಫಿಡವಿಟನ್ನು ಪಡೆದುಕೊಳ್ಳುವುದು. ಆರ್.ಡಿ. ಸಂಖ್ಯೆಯುಳ್ಳ ವಂಶವೃಕ್ಷ ದೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣೆ, ಆಧಾರ್ ಪತ್ರ ಮತ್ತು ದೂರವಾಣಿ ಸಂಖ್ಯೆಯನ್ನು ಸಲ್ಲಿಸಬೇಕು. ದಾಖಾಲಾತಿಗಳೊಂದಿಗೆ (ಪಟ್ಟೆದಾರರು ಮರಣಹೊಂದಿದರೆ ಪಟ್ಟೆದಾರರ ನೇರ ವಾರಸುದಾರರಲ್ಲದೇ ಇತರೇ ಸಂಬAಧಗಳಿಗೆ ನೇರ ಖಾತೆ ಮಾಡುವ ಪ್ರಕ್ರಿಯೆ ಹೊರತುಪಡಿಸಿ) ಮನವಿಯನ್ನು/ ದಾಖಲೆಗಳನ್ನು ಗ್ರಾಮ ಆಡಳಿತ ಅಧಿಕರಿಗಳಿಗೆ ಸಲ್ಲಿಸಬೇಕು ಎಂದು ತಾಲೂಕು ತಹಶೀಲ್ದಾರ್ ಶ್ರೀಧರ ತಿಳಿಸಿದ್ದಾರೆ.