ಮಡಿಕೇರಿ, ಡಿ. ೯: ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಚೌರಿರ ಜಗತ್ ತಿಮ್ಮಯ್ಯ ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಗ್ಮ ನೆಟ್ವರ್ಕ್ ವ್ಯವಸ್ಥಾಪಕ ನಿರ್ದೇಶಕ ಅವರೇಮಾದಂಡ ಶರಣ್ ಪೂಣಚ್ಚ ಹಾಗೂ ಸಮಾಜ ಸೇವಕ ಪಾಲೆಂಗಡ ಅಮಿತ್ ಭೀಮಯ್ಯ, ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಖಜಾಂಚಿ ಯತೀಶ್ ವಿ.ಎ ಹಾಗೂ ಸಂಸ್ಥೆಯ ನಿರ್ದೇಶಕರು ಪಾಲ್ಗೊಂಡಿದ್ದರು.

ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ತರಬೇತಿ ಪಡೆದು ಕೂಡಿಗೆ ಸಾಯಿ ಕ್ರೀಡಾ ಶಾಲೆಗೆ ಆಯ್ಕೆಯಾಗಿ ಓದುತ್ತಿರುವ ವಿದ್ಯಾರ್ಥಿಗಳಾದ ಭವಿಷ್ಯ ಡಿ.ಕೆ., ಅಹಲ್ಯ ಟಿ.ಆರ್., ಸಿಂಚನ ಕೆ.ಪಿ., ಸ್ಮಿತಾ ಹೆಚ್.ಜಿ., ಯಶಿಕಾ, ಕೆ.ಕೆ. ಚಿನ್ಮಿತ್, ಎಂ.ಸಿ., ರತೀಶ್ ಸಿ.ಎಂ., ಮಂಜುಶ್ರೀ, ಪೂಜನ್ ಸಿ.ಜೆ. ಭವಿಷ್ಯ ಕೆ.ಹೆಚ್. ಹಾಗೂ ದೇಚಕ್ಕ ಎಸ್.ಕೆ. ಇವರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಹಾಕಿ ಆಟಕ್ಕೆ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಓದುತ್ತಿರುವ ರಾಷ್ಟçಮಟ್ಟದ ಹಾಕಿ ಅಂಪೈರ್ ಆಗಿ ಆಯ್ಕೆಯಾಗಿ ತೆರಳಿರುವ ಅಪ್ಪಚೆಟ್ಟೋಳಂಡ ಅಯ್ಯಪ್ಪ ಹಾಗೂ ಪ್ರಸ್ತುತ ಪದವಿ ಕಾಲೇಜಿನಲ್ಲಿ ಓದುತ್ತಿರುವ ಕರಾಟೆಪಟುಗಳಾದ ದಿವಿನ್ ಬೋಪಯ್ಯ ಹಾಗೂ ದಿಲನ್ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾಸಂಸ್ಥೆಯಲ್ಲಿ ಈ ಹಿಂದೆ ರಾಷ್ಟçಮಟ್ಟದ ಥ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದ ಡಯಾನ ಪ್ರಸ್ತುತ ಪದವಿ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿಯಾಗಿದ್ದು ಭಾರತೀಯ ಸೈನ್ಯಕ್ಕೆ ಆಯ್ಕೆ ಆಗುವ ಮೂಲಕ ಸಾಧನೆ ಮಾಡಿದ್ದಾಳೆ. ಇವರನ್ನು ಕೂಡ ಈ ಸಂದರ್ಭ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಕೆ.ಜಿ. ರಾಮಮೂರ್ತಿ, ಎಂ.ಕೆ. ಚೆಂಗಪ್ಪ, ಪಿ.ಎ. ದೇವಯ್ಯ, ಪಿ.ಟಿ, ಹರೀಶ್ ಹಾಗೂ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಖಜಾಂಚಿ ಯತೀಶ್ ಅವರು ಸ್ವಾಗತಿಸಿ, ಮುಖ್ಯ ಶಿಕ್ಷಕಿ ರೇಷ್ಮಾ ಸುಬ್ಬಯ್ಯ ವಂದಿಸಿದರು. ಉಪನ್ಯಾಸಕರಾದ ಕಲ್ಪನ ಸಾಮ್ರಾಟ್ ಹಾಗೂ ರಶ್ಮಿ ಉತ್ತಪ್ಪ ಕಾರ್ಯಕ್ರಮ ನಿರೂಪಿಸಿದರು.