ಕಣಿವೆ, ಡಿ. ೯: ಕುಶಾಲನಗರ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಇಲಾಖೆಯ ಸಿಬ್ಬಂದಿಗಳು ಕುಶಾಲನಗರದ ಸೋಮೇಶ್ವರ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಕುರಿತಾಗಿ ಈಡೀಸ್ ಲಾರ್ವಾ ಸಮೀಕ್ಷೆಯ ಮೂಲಕ ಆರೋಗ್ಯದ ಅರಿವು ಮೂಡಿಸಿದರು.
ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳಬೇಕು. ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸಬೇಕು. ಡೆಂಗ್ಯೂ, ಮಲೇರಿಯಾ, ಚಿಕನ್ ಗೂನ್ಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಬೇಕೆಂದು ನಿವಾಸಿಗಳಿಗೆ ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ವಿಶ್ವಜ್ಞಾ ಮನವಿ ಮಾಡಿದರು. ಹಾಗೆಯೇ ರಾಷ್ಟಿçÃಯ ಕುಷ್ಠರೋಗ ನಿರ್ಮೂಲನೆ, ಕ್ಷಯರೋಗ ನಿಯಂತ್ರಣ ಮೊದಲಾದ ಆರೋಗ್ಯ ಕಾರ್ಯಕ್ರಮಗಳ ಕುರಿತು ವಿಶ್ಚಜ್ಞಾ ಮಾಹಿತಿ ನೀಡಿದರು.
ಆರೋಗ್ಯ ಶಿಕ್ಷಣ ಅಧಿಕಾರಿ ಜನಾರ್ಧನ್, ಸಿಬ್ಬಂದಿಗಳಾದ ಸಂಜಯ್, ಲತಾ, ಪ್ರೇಮ, ಹೇಮಂತ್, ಭವಾನಿ, ಸೌಮ್ಯ, ಆಶಾ ಕಾರ್ಯಕರ್ತರಾದ ಲತಾ, ಭವಾನಿ, ನಂದಿನಿ, ಪ್ರೇಮ, ಹೆಚ್.ವಿ. ರೂಪ, ಯೋಗಿನಿ, ರೂಪ, ನಿರ್ಮಲ, ಮೀನಾಕ್ಷಿ, ಕೆಂಪಮ್ಮ ಇದ್ದರು.