ಶ್ರೀಮAಗಲ, ಡಿ. ೯ : ಪೊನ್ನಂಪೇಟೆ ತಾಲೂಕಿನ ನೆಮ್ಮಲೆ ಗ್ರಾಮದ ಕೋಲ್‌ಮಂದ್‌ನಲ್ಲಿ ಪುತ್ತರಿ ಕೋಲ್‌ಮಂದ್ ನಮ್ಮೆ ವಿಜೃಂಭಣೆಯಿAದ ಜರುಗಿತು. ಪುತ್ತರಿ ಕೋಲಾಟ್, ಉಮ್ಮತ್ತಾಟ್, ಕತ್ತಿಯಾಟ್, ತಾಲಿಪಾಟ್, ವಾಲಗತಾಟ್, ಪರೆಯಕಳಿ, ವಿವಿಧ ನೃತ್ಯಗಳು, ಹಾಡುಗಾರಿಕೆ ಸಂಭ್ರಮದ ವಾತಾವರಣ ಮೂಡಿಸಿತು.
ಈ ಸಂದರ್ಭ ಮಾತನಾಡಿದ ನೆಮ್ಮಲೆ ಗ್ರಾಮಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್ ಅವರು, ಅತ್ಯಂತ ವಿಜೃಂಭಣೆಯಿAದ ಗ್ರಾಮಸ್ಥರೆಲ್ಲರೂ ಒಗ್ಗೂಡಿಕೊಂಡು ನಡೆಸುತ್ತಿದ್ದ ನೆಮ್ಮಲೆ ಗ್ರಾಮದ ಈ ಮಂದ್ ನಮ್ಮೆಗೆ ಕೆಲವು ವರ್ಷ ಹಿನ್ನಡೆಯಾಗಿತ್ತು. ಕಳೆದ ಏಳು ವರ್ಷಗಳಿಂದ ಹಿಂದಿನ ಕಾಲದ ಗತವೈಭವವನ್ನು ಮರುಕಳಿಸುವಂತೆ ಮಾಡಲು ಗ್ರಾಮ ಸಮಿತಿ ವತಿಯಿಂದ ಪ್ರಯತ್ನಗಳಾಗುತ್ತಿವೆ. ಗ್ರಾಮಸ್ಥರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕಲಿಸುವ ಸಂಕಲ್ಪ ಮಾಡಿದಾಗ ಮಾತ್ರ ಈ ಪ್ರಯತ್ನಕ್ಕೆ ಫಲ ಸಿಕ್ಕಿದಂತಾಗುತ್ತದೆ ಹಾಗೂ ವಿಶ್ವ ಖ್ಯಾತಿಯ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಮನಸು ಮಾಡುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ನಿರ್ದೇಶಕಿ ಚಂಗುಲAಡ ಅಶ್ವಿನಿ ಸತೀಶ್ ಮಾತನಾಡಿ, ನಾವು ನಮ್ಮ ಮಕ್ಕಳಿಗೆ ಏನನ್ನು ಕಲಿಸುತ್ತೇವೆಯೋ ಅದನ್ನೇ ಮಕ್ಕಳು ಮುಂದುವರಿಸುತ್ತಾರೆ. ಮುಂದಿನ ಪೀಳಿಗೆಯೂ ಅದನ್ನೇ ಆಚರಿಸಿಕೊಂಡು ಮುಂದುವರಿಯುವAತಾಗುತ್ತದೆ. ಸಂಸ್ಕೃತಿಯ ಉಳಿಕೆಗಾಗಿ ಎಲ್ಲರೂ ತಮ್ಮ ಮಕ್ಕಳು ಹಾಗೂ ಕುಟುಂಬ ಸದಸ್ಯರೊಂದಿಗೆ ಮಂದ್ ನಮ್ಮೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಾಡ ರೇಶ್ಮ ಕಾರ್ಯಪ್ಪ ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿ ಸೇರಿದಂತೆ ಇತರ ಸಂಸ್ಕೃತಿಯನ್ನು ಕಲಿಯಲು ಪ್ರೋತ್ಸಾಹ ನೀಡುವುದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಪೋಷಕರು ನಮ್ಮ ಜನಾಂಗದ ಹಾಗೂ ಈ ಮಣ್ಣಿನ ಸಂಸ್ಕೃತಿಯ ಕಲಿಕೆಗೆ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ ಎಂದರು.
ಊರ್‌ಕೋಲ್ ಕೋಲಾಟದ ನಂತರ ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಕೂಟದ ಕಲಾವಿದರಿಂದ ಪುತ್ತರಿ ಕೋಲಾಟ್, ಕತ್ತಿಯಾಟ್,ತಾಲಿಪಾಟ್, ಪರೆಯಕಳಿ, ಚೆಟ್ಟಂಗಡ ಪೊಮ್ಮಕ್ಕಡ ಉಮ್ಮತ್ತಾಟ್, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಲಾವಿದರಿಂದ, ರೂಟ್ಸ್ ವಿದ್ಯಾ ಸಂಸ್ಥೆ ಮಕ್ಕಳಿಂದ, ಚೆಟ್ಟಂಗಡ ಪೊಮ್ಮಕ್ಕಡ ಕೂಟದಿಂದ ಹಾಗೂ ಪೆಮ್ಮಂಡ ದೀಪ್ತಿಯವರಿಂದ ವಿವಿಧ ಕೊಡವ ನೃತ್ಯ ಪ್ರದರ್ಶನ ಹಾಗೂ ಚೆಟ್ಟಂಗಡ ಲೇಖನ ಅಕ್ಕಮ್ಮಳ ಹಾಡುಗಾರಿಕೆ ಹಾಗೂ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ತರಬೇತಿ ಪಡೆದ ಮಕ್ಕಳ ಉಮ್ಮತ್ತಾಟ್ ಹಾಗೂ ಪುತ್ತರಿ ಕೋಲಾಟ್ ಪ್ರದರ್ಶನ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ನೆಮ್ಮಲೆ ಗ್ರಾಮದ ತಕ್ಕ ಮುಖ್ಯಸ್ಥರಾದ ಚೆಟ್ಟಂಗಡ ಸುರೇಂದ್ರ ನಾಣಯ್ಯ ಹಾಗೂ ಗ್ರಾಮಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಕುಂಞAಗಡ ಕೃಷ್ಣ ಭೀಮಯ್ಯರವರ ಮುಂದಾಳತ್ವದಲ್ಲಿ ನಡೆದ ಮಂದ್ ನಮ್ಮೆಯ ವೇದಿಕೆಯಲ್ಲಿ ನಿರ್ದೇಶಕರಾದ ಚೊಟ್ಟೆಯಾಂಡಮಾಡ ಪ್ರಜಾ ಮುದ್ದಯ್ಯ, ಚೆಟ್ಟಂಗಡ ರಂಜು ಕರುಂಬಯ್ಯ, ಮಾಣೀರ ಉಮೇಶ್, ಚೆಟ್ಟಂಗಡ ಶಮ್ಮಿ ಉತ್ತಪ್ಪ, ಮಾಣೀರ ಪ್ರವೀಣ್, ಕಾಳಿಮಾಡ ದಿನೇಶ್, ಮಾಣೀರ ದೀಪಕ್ ಉಪಸ್ಥಿತರಿದ್ದರು.
ಟಿ.ಶೆಟ್ಟಿಗೇರಿ ಕೊಡವ ಸಮಾಜದ ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.