ವೀರಾಜಪೇಟೆ, ನ. ೯ : ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗೆ ವೀರಾಜಪೇಟೆ ಜೆಎಂಎಫ್‌ಸಿ ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ವೀರಾಜಪೇಟೆ ತಾಲೂಕು ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ ಪಿ.ಎಂ. ಪ್ರಕಾಶ್ (೫೧) ಶಿಕ್ಷೆಗೆ ಗುರಿಯಾದ ವ್ಯಕ್ತಿ.

ವೀರಾಜಪೇಟೆ ಕೆ.ಬೋಯಿಕೇರಿ ಗ್ರಾಮದ ನಿವಾಸಿ ದೇವಯ್ಯ (ಪ್ರಕಾಶ್) ಅವರಿಗೆ ಚೆಕ್ ನೀಡಿ ರೂ. ೪.೨೦ ಲಕ್ಷ ಹಣವನ್ನು ಪ್ರಕಾಶ್ ಪಡೆದುಕೊಂಡಿದ್ದು, ಹಣ ಹಿಂದಿರುಗಿಸದಿದ್ದ ಸಂದರ್ಭ ದೇವಯ್ಯ ಅವರು ಚೆಕ್ ಅನ್ನು ಬ್ಯಾಂಕ್‌ಗೆ ನೀಡಿದ್ದು, ಈ ಸಂದರ್ಭ ಅಮಾನ್ಯವಾಗಿದೆ. ಈ ಹಿನ್ನೆಲೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ವಿಚಾರಣೆ ಕೈಗೊಂಡ ವೀರಾಜಪೇಟೆ ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶರಾದ ಪ್ರದೀಪ್ ಪೋತೆದಾರ್ ಅವರು, ರೂ. ೪.೨೦ ಲಕ್ಷ ಹಣದೊಂದಿಗೆ ಹೆಚ್ಚುವರಿ ರೂ. ೨ ಸಾವಿರ ಪಾವತಿಯೊಂದಿಗೆ ೬ ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಎನ್.ಎಸ್. ದೇವಯ್ಯ ಪರ ಬಿ.ಆರ್ ಶೆಟ್ಟಿ ವಾದ ಮಂಡಿಸಿದರು.