ಕೊಡ್ಲಿಪೇಟೆ, ಡಿ. ೩: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಬೆಂಬಳೂರು ಕಿರುಹೊಳೆಗೆ ಕಾಫಿ ಪಲ್ಪರ್ನ ತ್ಯಾಜ್ಯ ನೀರನ್ನು ಹರಿಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಮಡಿಕೇರಿ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಡಿಕೇರಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಅಗಸ್ಟಿನ್ ಜಾನ್ ಮತ್ತು ಅರ್ವಿನ್ ನೇತೃತ್ವದಲ್ಲಿ ಭೇಟಿ ನೀಡಿ ಅಧಿಕಾರಿಗಳು ಕೆರೆಗೆ ತ್ಯಾಜ್ಯ ನೀರು ಹರಿದು ಬರುತ್ತಿರುವುದನ್ನು ವೀಕ್ಷಣೆ ಮಾಡಿದರು.
ಮೇಲ್ಭಾಗದಿಂದ ತ್ಯಾಜ್ಯ ಹರಿದುಬರುತ್ತಿರುವುದರಿಂದ ಮೊದಲು ಪಂಚಾಯಿತಿಯಿAದ ಕಾಫಿ ಪಲ್ಪರ್ ಘಟಕ ನಡೆಸುತ್ತಿರುವ ಬೆಳೆಗಾರರಿಗೆ ನೋಟೀಸ್ ನೀಡಿ ಇಂಗುಗುAಡಿ ಮಾಡುವಂತೆ ತಿಳಿಸಿ. ನಂತರವೂ ತ್ಯಾಜ್ಯ ಹರಿಸುವವರ ಮೇಲೆ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಕುಮಾರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.