ಸೋಮವಾರಪೇಟೆ, ಡಿ. ೩: ಕೂಲಿ ಕಾರ್ಮಿಕ ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಗನ ಎರಡೂ ಕಿಡ್ನಿಗಳೂ ವೈಫಲ್ಯಗೊಂಡು ೨೧ನೇ ವಯಸ್ಸಿಗೆ ಮನೆಯ ಮೂಲೆ ಸೇರಿರುವ ಸಂಕಷ್ಟದ ಘಟನೆ ಬೆಳಕಿಗೆ ಬಂದಿದೆ. ಮಗನಿಗೆ ತನ್ನ ಒಂದು ಕಿಡ್ನಿಯನ್ನು ನೀಡುವ ಮೂಲಕ ಜೀವದಾನಕ್ಕೆ ತಂದೆ ಮುಂದಾಗಿದ್ದರೂ, ಈ ಪ್ರಕ್ರಿಯೆಗೆ ಲಕ್ಷಾಂತರ ರೂಪಾಯಿ ಬೇಕಾಗಿರುವುದರಿಂದ ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕುಟುಂಬವಿದೆ.
ಪಟ್ಟಣ ಸಮೀಪದ ಚೌಡ್ಲು ಗ್ರಾಮದ ಶಿವರಾಮ್ ಹಾಗೂ ಸಾವಿತ್ರಿ ದಂಪತಿ ಪುತ್ರ, ೨೧ ವರ್ಷದ ಯಶವಂತ್ ತನ್ನ ಎರಡೂ ಕಿಡ್ನಿಗಳ ವೈಫಲ್ಯದಿಂದಾಗಿ ಮನೆಯ ಮೂಲೆಯಲ್ಲಿ ಮಲಗಿದ್ದಾನೆ.
ವಾರಕ್ಕೆ ೩ ಬಾರಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಪಡುತ್ತಿದ್ದು, ತಕ್ಷಣ ಒಂದು ಕಿಡ್ನಿಯನ್ನಾದರೂ ಅಳವಡಿಸಿದರೆ ಬದುಕು ಮುಂದುವರೆಸಬಹುದಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಪಿಯುಸಿ ವಿದ್ಯಾಭ್ಯಾಸದ ನಂತರ ಮನೆಯ ಕಷ್ಟವನ್ನು ಅರಿತು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಯಶವಂತ್‌ಗೆ, ದಿಢೀರಾಗಿ ಅಧಿಕ ರಕ್ತದೊತ್ತಡದೊಂದಿಗೆ ಸಕ್ಕರೆ ಕಾಯಿಲೆಯೂ ಕಾಣಿಸಿಕೊಂಡಿದ್ದು, ಮಂಗಳೂರಿಗೆ ಕರೆದೊಯ್ದು ಹೆಚ್ಚಿನ ತಪಾಸಣೆ ನಡೆಸಿದ ನಂತರ ವೈದ್ಯರು, ಎರಡೂ ಕಿಡ್ನಿಗಳು ವಿಫಲವಾಗಿರುವುದಾಗಿ ತಿಳಿಸಿದ್ದಾರೆ.
ಇದನ್ನು ಕೇಳಿ ದಿಗ್ಭçಮೆಗೊಳಗಾದ ಕುಟುಂಬ, ಇರುವ ಒಬ್ಬ ಮಗನನ್ನು ಉಳಿಸಿಕೊಡಿ ಎಂದು ವೈದ್ಯರನ್ನು ಕಾಡಿಬೇಡಿದ್ದಾರೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ ಮೇರೆ, ಯಶವಂತ್‌ನನ್ನು ಮೈಸೂರಿನ ಸಿಗ್ಮಾ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಲಾಯಿತು.
ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಯಶವಂತ್‌ಗೆ ಕನಿಷ್ಟ ಒಂದು ಕಿಡ್ನಿಯನ್ನಾದರೂ ನೀಡಿದರೆ ಮತ್ತೆ ಎಂದಿನAತೆ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಈತನ ಅಜ್ಜಿ ತನ್ನ ಒಂದು ಕಿಡ್ನಿ ನೀಡಲು ಮನಸ್ಸು ಮಾಡಿದ್ದರೂ, ಹಣಕಾಸಿನ ನೆರವು ಆ ಕ್ಷಣಕ್ಕೆ ಒದಗಲಿಲ್ಲ. ಇದೇ ಕೊರಗಿನಲ್ಲಿ ಕಳೆದ ೫ ತಿಂಗಳ ಹಿಂದೆ ಅಜ್ಜಿಯೂ ಅಸುನೀಗಿದ್ದಾರೆ.
ಇದೀಗ ಮಗನಿಗೆ ಬದುಕು ಕಟ್ಟಿಕೊಡಲು ತಂದೆಯೇ ಮನಸ್ಸು ಮಾಡಿದ್ದು, ತನ್ನ ಒಂದು ಕಿಡ್ನಿಯನ್ನು ನೀಡಲು ಮುಂದಾಗಿದ್ದಾರೆ. ೫೬ ವರ್ಷದ ಶಿವರಾಮ್ ಅವರ ಒಂದು ಕಿಡ್ನಿಯನ್ನು ಬೇರ್ಪಡಿಸಿ ಮಗನಿಗೆ ಅಳವಡಿಸಬೇಕಿದೆ. ಈ ಶಸ್ತç ಚಿಕಿತ್ಸೆಗೆ ಕನಿಷ್ಟ ೧೦ ಲಕ್ಷ ರೂಪಾಯಿಯ ಅವಶ್ಯಕತೆಯಿದೆ.
ವೈದ್ಯಕೀಯ ಚಿಕಿತ್ಸೆ, ಶಸ್ತç ಚಿಕಿತ್ಸೆಯನ್ನು ಸಿಗ್ಮಾ ಆಸ್ಪತ್ರೆಯ ವೈದ್ಯರಾದ ಅನಿಕೇತ್ ಪ್ರಭಾಕರ್ ಅವರು ಮಾಡಿಕೊಡುವ ಭರವಸೆ ನೀಡಿದ್ದಾರೆ. ಆದರೆ ಇದಕ್ಕೆ ತಗುಲುವ ರೂ.೧೦ಲಕ್ಷವನ್ನು ಕುಟುಂಬಕ್ಕೆ ಭರಿಸಲು ಸಾಧ್ಯವಾಗುತ್ತಿಲ್ಲ.
ಅಪ್ಪ-ಅಮ್ಮ ಪ್ರತಿದಿನ ಕೂಲಿ ಮಾಡಿ ಮನೆಯ ನಿರ್ವಹಣೆಯೊಂದಿಗೆ ಈತನ ಔಷಧಗಳಿಗೆ ಹಣ ಹೊಂದಿಸುತ್ತಿದ್ದಾರೆ. ಸಹೃದಯ ದಾನಿಗಳಿಂದ ಮಾತ್ರ ಮಗನ ಜೀವ ಉಳಿಸಲು ಸಾಧ್ಯ’ ಎಂದು ಹೆತ್ತ ಕರುಳು ಕಣ್ಣೀರು ಹಾಕುತ್ತಿದೆ.
ಯಶವಂತ್‌ನ ಕಿಡ್ನಿ ಶಸ್ತçಚಿಕಿತ್ಸೆಗೆ ೧೦ ಲಕ್ಷ ರೂಪಾಯಿಯ ಅಗತ್ಯವಿದೆ. ಸಹೃದಯರು ಸಣ್ಣಪುಟ್ಟ ನೆರವು ನೀಡಿದರೂ ಸಹ ಈ ಕುಟುಂಬಕ್ಕೆ ದೊಡ್ಡ ಉಪಕಾರವೇ ಆಗುತ್ತದೆ. ಈತನಿಗೆ ಬದುಕು ಕಟ್ಟಿಕೊಡಲು ಮನಸ್ಸು ಮಾಡುವ ಸಹೃದಯ ದಾನಿಗಳು ಸೋಮವಾರಪೇಟೆ ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ ೧೩೮೨೫೦೦೧೦೧೪೧೦೪೦೧ (ಯಶವಂತ್‌ಕುಮಾರ್) ಐಎಫ್‌ಎಸ್‌ಸಿ ಕೋಡ್ ಕೆ.ಎ.ಆರ್.ಬಿ.೦೦೦೦೧೩೮ ಇಲ್ಲಿಗೆ ನೆರವು ನೀಡಬಹುದು. ಇದರೊಂದಿಗೆ ಗೂಗಲ್ ಪೇ-ಫೋನ್ ಪೇ (೯೧೪೮೧೭೪೨೦೬) ಮುಖಾಂತರವೂ ಸಹಾಯ ಹಸ್ತ ಚಾಚಬಹುದು. ಹೆಚ್ಚಿನ ಮಾಹಿತಿಗೆ ಈ ಮೇಲಿನ ಸಂಖ್ಯೆಯನ್ನು ಸಂಪರ್ಕಿಸಬಹುದು.
- ವಿಜಯ್ ಹಾನಗಲ್