ಸೋಮವಾರಪೇಟೆ, ಡಿ.೨: ಹನುಮ ಜಯಂತಿ ಅಂಗವಾಗಿ ಪಟ್ಟಣದ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ನಂಜುAಡೇಶ್ವರ ಅವರ ಪುರೋಹಿತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಅರ್ಚನೆ ನಡೆಯಿತು. ನಂತರ ಅರ್ಚಕ ಜಗದೀಶ್ ಉಡುಪ ಮತ್ತು ತಂಡದವರಿAದ ಮಾರುತಿ ಹೋಮ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎಲ್.ಸೀತಾರಾಂ, ಸಮಿತಿ ಕಾರ್ಯದರ್ಶಿ ನಂದಕುಮಾರ್, ಸದಸ್ಯರುಗಳಾದ ರಾಘವ, ಸುರೇಶ್, ಹಾಲಪ್ಪ, ಗಣೇಶ್ ಸೇರಿದಂತೆ ಇತರರು ಇದ್ದರು.