ವೀರಾಜಪೇಟೆ, ಡಿ. ೨: ಅಂತರರಾಷ್ಟಿçÃಯ ಮಟ್ಟದ ಬಾಸ್ಕೆಟ್ ಬಾಲ್ ಹಾಕಿ ಮತ್ತು ಕರಾಟೆ ಆಟಗಾರ್ತಿ ಕಳ್ಳಿರ ರೇಖಾ ಬೋಪಣ್ಣ ಅವರನ್ನು ಕಾಕೋಟುಪರಂಬು ಗ್ರಾ.ಪಂ. ವತಿಯಿಂದ ಗ್ರಾಮ ಸಭೆಯಲ್ಲಿ ಇತ್ತಿಚೆಗೆ ಸನ್ಮಾನಿಸಿ ಗೌರವಿಸಲಾಯಿತು ಗ್ರಾ.ಪಂ. ಅಧ್ಯಕ್ಷೆ ಬಟ್ಟಕಾಳಂಡ ಕಾಮಿ ಸುರೇಶ್ ನೇತೃತ್ವದಲ್ಲಿ ಸನ್ಮಾನ ನಡೆಯಿತು.

ಚೆಪ್ಪುಡಿರ ಅರುಣ್‌ಮಾಚಯ್ಯ ಅವರಿಂದÀ ಕರಾಟೆ ತರಬೇತಿ ಪಡೆದು ಬ್ಲಾö್ಯಕ್‌ಬೆಲ್ಟ್ ಪಡೆದುಕೊಂಡಿದ್ದಾರೆ. ಕರಾಟೆಯಲ್ಲಿ ಅನೇಕ ಚಿನ್ನ ಬೆಳ್ಳಿಯ ಪದಕ ಪಡೆದಿದ್ದಾರೆ. ಬಾಸ್ಕೆಟ್‌ಬಾಲ್ ಆಟದಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಹಾಕಿ ಪಂದ್ಯಾಟದಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಕಳೆದ ಜನವರಿಯಲ್ಲಿ ಬೆಂಗಳೂರು ಕಂಠೀರವ ಸ್ಟೇಡಿಯಂನಲ್ಲಿ ನಡೆದ ಆಲ್ ಇಂಡಿಯ ಮಾಸ್ಟರ್ ಬಾಸ್ಕೆಟ್ ಬಾಲ್‌ನಲ್ಲಿನ ೫೦ರ ವಯೋಮಿತಿಯಲ್ಲಿ ರೇಖಾ ಪ್ರತಿನಿಧಿಸಿದ ತಂಡ ಮೂರನೇ ಸ್ಥಾನ ಪಡೆದಿದೆ. ಈ ಹಿನ್ನೆಲೆ ಗ್ರಾ.ಪಂ. ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಉಪಾಧ್ಯಕ್ಷ ಚೋಳಂಡ ಸುಗುಣ, ಪಿಡಿಓ ಮಂಜುಳ, ಗ್ರಾ.ಪಂ. ಸದಸ್ಯರಾದ ಮೇವಡ ಗಿರೀಶ್ ಬೋಪಣ್ಣ, ಮೇವಡ ರತ್ನ ಕರುಂಬಯ್ಯ, ಅರೆಯಡ ಮೋಹನ್ ಅಧಿಕಾರಿಗಳ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.