ಮಡಿಕೇರಿ, ಡಿ. ೨: ಮಣಿಪಾಲ ವಿಶ್ವವಿದ್ಯಾಲಯದ ೩೩ ನೇ ಘಟಿಕೋತ್ಸವದಲ್ಲಿ ಡಾ. ಸುಮ. ಪಿ.ಬಿ. ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಪುರಸ್ಕರಿಸಲಾಯಿತು. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗಣಿತ ವಿಭಾಗದ ಸಹಪ್ರಾಧ್ಯಾಪಕಿಯವರಾದ ಡಾ. ಶೋಭಾ ಈರಪ್ಪ ಅವರ ಮಾರ್ಗದರ್ಶನದಲ್ಲಿ ಸುಮ ಅವರು ಮಂಡಿಸಿದ Sಣuಜಥಿ oಟಿ iಣeಡಿಚಿಣive meಣhoಜs ಚಿಟಿಜ iಣ’s ಚಿಠಿಠಿಟiಛಿಚಿಣioಟಿs oಟಿ ಊiಟbeಡಿಣ Sಠಿಚಿಛಿe ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಇವರು ಪ್ರಸ್ತುತ ಮೈಸೂರು ವಿದ್ಯಾವರ್ಧಕ ಇಂಜಿನಿಯರಿAಗ್ ಕಾಲೇಜಿನ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಡಿಕೇರಿ ನಿವಾಸಿ ಪಾಣತ್ತಲೆ ಭೀಮಯ್ಯ ಮತ್ತು ಮಾಲತಿ ದಂಪತಿ ಪುತ್ರಿಯಾಗಿದ್ದು, ಉಳುವಾರನ ವೆಂಕಟೇಶ್ ಅವರ ಪತ್ನಿ.