ಮಡಿಕೇರಿ, ಡಿ. ೨: ಕೊಡಗಿನ ಯುವಕ ಉದಯೋನ್ಮುಖ ಟೆನ್ನಿಸ್ ಆಟಗಾರ ಕಲಿಯಂಡ ನಿಕಿ ಪೂಣಚ್ಚ ಅವರು ೨೦೨೬ರ ಆಸ್ಟೆçÃಲಿಯನ್ ಓಪನ್ ಗ್ರಾö್ಯಂಡ್ ಸ್ಲಾಮರ್ ಟೆನ್ನಿಸ್ ಟೂರ್ನಿಯಲ್ಲಿ ಆಡಲು ಅವಕಾಶ ಪಡೆದಿದ್ದಾರೆ. ಚೀನಾದ ಚೆಂಗುವಿನಲ್ಲಿ ನಡೆದ ಏಷ್ಯಾ ಫೆಸಿಫಿಕ್ ವೈಲ್ಡ್ ಕಾರ್ಡ್ ಪ್ಲೇ ಆಫ್ ಟೂರ್ನಿಯಲ್ಲಿ ಡಬಲ್ ಪ್ರಶಸ್ತಿ ಗೆಲ್ಲುವ ಮೂಲಕ ನಿಕಿ ಪೂಣಚ್ಚ ಆಸ್ಟೆçÃಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಅರ್ಹತೆಗಳಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆ (ಕೆ.ಎಸ್.ಎಲ್.ಟಿ.ಎ.) ರೂ. ೧ ಲಕ್ಷ ನಗದು ಬಹುಮಾನ ಘೋಷಿಸಿದೆ. ಕೊಡಗಿನ ಕಕ್ಕಬೆ ಮೂಲ ದವರಾಗಿದ್ದು, ಮೈಸೂರುವಿನಲ್ಲಿ ೪ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ)

ನೆಲೆಸಿರುವ ಕಲಿಯಂಡ ಮನು ಪೂಣಚ್ಚ ಹಾಗೂ ವೀಣಾ ದಂಪತಿಯ ಪುತ್ರ ನಿಕಿ ಪೂಣಚ್ಚ. ಇದೇ ಮೊದಲ ಬಾರಿಗೆ ಗ್ರಾö್ಯಂಡ್ ಸ್ಲಾö್ಯಮ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಖ್ಯಾತ ಟೆನ್ನಿಸ್ ಪಟು ಕೊಡಗಿನವರಾದ ರೋಹನ್ ಬೋಪಣ್ಣ ಅವರ ಹಾದಿಯಲ್ಲಿ ನಿಕಿ ಪೂಣಚ್ಚ ಅವರು ಸಾಧನೆ ತೋರುತ್ತಿರುವುದು ಕೊಡಗು ಜಿಲ್ಲೆಗೂ ಹೆಮ್ಮೆಯ ವಿಚಾರವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಟೆನ್ನಿಸ್ ಸಂಸ್ಥೆ ಕಾರ್ಯದರ್ಶಿ ಮಹೇಶ್ವರ್ ರಾವ್ ಅವರು ನಿಕಿ ಪೂಣಚ್ಚ ಅವರ ಸಾಧನೆ ನಮಗೆಲ್ಲಾ ಸಂತಸ ಮೂಡಿಸಿದ್ದು ಇವರಿಂದ ಉತ್ತಮ ಸಾಧನೆ ನಿರೀಕ್ಷಿಸಿರುವುದಾಗಿ ಹೇಳಿದ್ದಾರೆ.