ಮಡಿಕೇರಿ, ಡಿ. ೨: ಹಾಕಿ ಕ್ರೀಡೆಯಲ್ಲಿನ ಸಾಧನೆಗಾಗಿ ಜಿಲ್ಲೆಯ ಕ್ರೀಡಾಪಟು ಸೋಮವಾರಪೇಟೆ ಮೂಲದವರಾದ ಆಭರಣ್ ಸುದೇವ್ ಅವರಿಗೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೨೩ರ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ನಿನ್ನೆ ಬೆಂಗಳೂರಿನ ರಾಜ್ಯ ಯುವ ಕೇಂದ್ರದ ಯವನಿಕಾ ಸಭಾಂಗಣದಲ್ಲಿ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ೪ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ)

ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ರೂ. ೪ ಲಕ್ಷ ನಗದು ಹಾಗೂ ಏಕಲವ್ಯರ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ಕೊಡಗಿನವರಾದ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಹಾಕಿ ಕರ್ನಾಟಕದ ಕಾರ್ಯದರ್ಶಿ ಒಲಂಪಿಯನ್ ಡಾ. ಎ.ಬಿ. ಸುಬ್ಬಯ್ಯ, ರಾಜ್ಯ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್, ಮತ್ತಿತರರ ಪ್ರಮುಖರು ಪಾಲ್ಗೊಂಡಿದ್ದರು.